ಕಾಸರಗೋಡು: ಕನ್ನಡಿಗ, ದಕ್ಷ ಪೊಲೀಸ್ ಅಧಿಕಾರಿ ಎಂದೇ ಖ್ಯಾತರಾದ ಹರೀಶ್ಚಂದ್ರ ನಾಯ್ಕ್ ಅವರಿಗೆ ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವ ಸಂದರ್ಭ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಷ್ಟ್ರಪತಿ ಪದಕ ಪ್ರದಾನ ಮಾಡಿದರು.
ಬದಿಯಡ್ಕ ಸನಿಹದ ಕರಿಂಬಿಲ ನಿವಾಸಿಯಾಗಿರುವ ಇವರು ಎಸ್.ಐ, ಸರ್ಕಲ್ ಇನ್ಸ್‍ಪೆಕ್ಟರ್, ಡಿವೈಎಸ್ಪಿ, ಹೆಚ್ಚುವರಿ ಎಸ್.ಪಿ ಆಗಿ ಪ್ರಸಕ್ತ ಎಸ್.ಪಿಯಾಗಿ ಬಡ್ತಿಗೊಂಡು ಕೋಯಿಕ್ಕೋಡು ಟ್ರಾಫಿಕ್ ವಿಭಾಗ ಎಸ್.ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಸೇವೆಗಾಗಿ ಈ ಹಿಂದೆ ಇವರಿಗೆ ಮುಖ್ಯಮಂತ್ರಿಯ ವಿಶೇಷ ಪ್ರಶಸ್ತಿ, ಡಿಜಿಪಿಯವರ ಪ್ರಶಸ್ತಿಯೂ ಲಭಿಸಿತ್ತು.
ಪೊಲೀಸ್ ಅಧಿಕಾರಿ ಹರೀಶ್ಚಂದ್ರ ನಾಯ್ಕ್ ಅವರಿಗೆ ರಾಷ್ಟ್ರಪತಿ ಪದಕ ಪ್ರದಾನ
0
ಆಗಸ್ಟ್ 16, 2022
Tags