ಕುಂಬಳೆ: ಕುಂಬಳೆ ಗೋಕುಲನಗರ ಗೆಳೆಯರ ಬಳಗದ ಆಶ್ರಯದಲ್ಲಿ ಶ್ರೀಕೃಷ್ಣ ಲೀಲೋತ್ಸವದ ಪ್ರಯುಕ್ತ 7ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ ಕುಂಬಳೆ ಭಾಗೀರಥಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಯೋಗೀಶ ಪದಕಣ್ಣಾಯ ಆರಿಕ್ಕಾಡಿ ಸಮಾರಂಭವನ್ನು ದೀಪ ಪ್ರಜ್ವಲನಗೈದು ಉದ್ಘಾಟಿಸಿದರು. ನಾರಾಯಣ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಹರಿನಾರಾಯಣ ಮಯ್ಯ ಪ್ರಧಾನ ಭಾಷಣಗೈದರು. ರಘುನಾಥ ಪೈ, ರಾಜೀವನ್ ವಿ.ವಿ.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಂಚಿಕಟ್ಟೆ ಕೋಡ್ದಬ್ಬು ದೈವಸ್ಥಾನದ ಬ್ರಹ್ಮಕಲಶೋತ್ಸವದ ರೂವಾರಿ ಸುಂದರ ಕಂಚಿಕಟ್ಟೆ ಅವರನ್ನು ಈ ಸಂದರ್ಭ ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ನಡೆದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ 110 ಕ್ಕಿಂತಲೂ ಮಿಕ್ಕಿದ ಪುಟಾಣಿಗಳು ಭಾಗವಹಿಸಿದ್ದರು.
ಗೋಕುಲನಗರ ಗೆಳೆಯರ ಬಳಗದಿಂದ ಮುದ್ದುಕೃಷ್ಣ ಸ್ಪರ್ಧೆ
0
ಆಗಸ್ಟ್ 22, 2022