ಕಾಸರಗೋಡು: 75 ನೇ ಸ್ವಾತಂತ್ರ್ಯ ದಿನಾಚರಣೆ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗಾವಾಗಿ ಬದಿಯಡ್ಕ ಮೂರನೇ ವಾರ್ಡು ಚೆನ್ನೆಗುಳಿ ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನವನ್ನು ವಿಶಿಷ್ಟವಾಗಿ ಆಚರಿಲಾಯಿತು. ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಆಸಿಫ್‍ಆಲಿ ಪಾಡಲಡ್ಕ ಅವರು ತಮ್ಮ ಮಕ್ಕಳ ಹುಟ್ಟುಹಬ್ಬ ಅಂಗವಾಗಿ ಅಂಗನವಾಡಿಗೆ ಕೊಡಮಾಡಿದ ಫ್ಯಾನ್ ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳನ್ನು ಅಂಗನವಾಡಿ ಶಿಕ್ಷಕಿ ಕಸ್ತೂರಿ ಅವರಿಗೆ ಹಸ್ತಾಂತರಿಸಿದರು.
ಸ್ವಾತಂತ್ರ್ಯೋತ್ಸವ: ಅಂಗನವಾಡಿಗೆ ಇಲೆಕ್ಟ್ರಾನಿಕ್ ಸಾಮಗ್ರಿ ವಿತರಣೆ
0
ಆಗಸ್ಟ್ 17, 2022