HEALTH TIPS

ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಿ, ಪೀಕ್ ಅವರ್‍ಗಳಲ್ಲಿ ಹೆಚ್ಚು ಪಾವತಿಸಬೇಡಿ, ಸುರಕ್ಷಿತ ಪ್ರಯಾಣ: 'ಕೇರಳ ಸವಾರಿ'ಯ ವಿಶೇಷತೆಗಳು: ನಿನ್ನೆಯಿಂದ ಪ್ಲೇ ಸ್ಟೋರಲ್ಲಿ ಕೊನೆಗೂ ಲಭ್ಯವಾದ ಹೊಸ ಯೋಜನೆ


       ತಿರುವನಂತಪುರ: ಸುರಕ್ಷಿತ ಮತ್ತು ಕೈಗೆಟುಕುವ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಕೇರಳದ ಸ್ವಂತ ಆಟೋ ಟ್ಯಾಕ್ಸಿ ಸೇವೆ ಕೇರಳ ಸವಾರಿ ಪ್ರಾರಂಭವಾಗಿದೆ. ದೇಶದಲ್ಲೇ ಮೊತ್ತಮೊದಲಬಾರಿಗೆ ಸರ್ಕಾರವೊಂದು ಆನ್ ಲೈನ್ ಅಟೋಸೇವೆ ಆರಂಭಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ತಿರುವನಂತಪುರ ಕನಕಕುನ್ನಿನಲ್ಲಿ  ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್‍ಲೈನ್ ಟ್ಯಾಕ್ಸಿ ಸೇವೆಯನ್ನು ಉದ್ಘಾಟಿಸಿದರು.
           ಕೇರಳ ಸವಾರಿ ಸಾರ್ವಜನಿಕರಿಗೆ ಸರ್ಕಾರಿ ಅನುಮೋದಿತ ದರದಲ್ಲಿ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸುತ್ತದೆ. ಕಾರ್ಮಿಕ ಇಲಾಖೆಯ ನೇತೃತ್ವದಲ್ಲಿ ಮೋಟಾರು ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕೇರಳ ಸವಾರಿ ಆನ್‍ಲೈನ್ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸಲಾಗಿದೆ. ಆರಂಭದಲ್ಲಿ ಈ ಯೋಜನೆಯನ್ನು ತಿರುವನಂತಪುರ ನಗರದಲ್ಲಿ ಜಾರಿಗೊಳಿಸಲಾಗಿದೆ.  ಇತರ ಆನ್‍ಲೈನ್ ಟ್ಯಾಕ್ಸಿ ವ್ಯವಸ್ಥೆಗಳಂತೆ ಪ್ರಯಾಣ ದರದಲ್ಲಿ ಯಾವುದೇ ಏರಿಳಿತವಿಲ್ಲ ಎಂದು ಕೇರಳ ಸವಾರಿ ಭರವಸೆ ನೀಡಿದೆ. ಪೀಕ್ ಅವರ್‍ಗಳಲ್ಲಿ ಹೆಚ್ಚು ಪಾವತಿಸಬೇಕಾಗಿಲ್ಲ. ಇತರ ಆನ್‍ಲೈನ್ ಟ್ಯಾಕ್ಸಿ ಕಂಪನಿಗಳು ಈಗ ಪೀಕ್ ಅವರ್‍ಗಳಲ್ಲಿ ಒಂದೂವರೆ ಪಟ್ಟು ಶುಲ್ಕವನ್ನು ಹೆಚ್ಚಿಸುವ ವ್ಯವಸ್ಥೆಯನ್ನು ಹೊಂದಿವೆ. ಇದರಿಂದ ಪ್ರಯಾಣಿಕರಿಗಾಗಲಿ, ಕಾರ್ಮಿಕರಿಗಾಗಲಿ ಯಾವುದೇ ಪ್ರಯೋಜನವಾಗಿಲ್ಲ.
             ಕೇರಳ ಸವಾರಿಯು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕೇವಲ 8 ಶೇ. ಸೇವಾ ಶುಲ್ಕವನ್ನು ಮಾತ್ರ ವಿಧಿಸುತ್ತದೆ. ಇತರೆ ಆನ್‍ಲೈನ್ ಟ್ಯಾಕ್ಸಿಗಳಲ್ಲಿ ಇದು ಶೇ.20ರಿಂದ 30ರಷ್ಟಿದೆ. ಕೇರಳ ಸವಾರಿಯಲ್ಲಿ ಸೇವಾ ಶುಲ್ಕವಾಗಿ ಸಂಗ್ರಹಿಸಿದ ಮೊತ್ತವನ್ನು ಈ ಯೋಜನೆಯ ಅನುμÁ್ಠನಕ್ಕೆ ಬಳಸಲು ನಿರ್ಧರಿಸಲಾಗಿದೆ ಮತ್ತು ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಪ್ರಚಾರದ ಪ್ರೋತ್ಸಾಹಕವಾಗಿ ನೀಡಲು ನಿರ್ಧರಿಸಲಾಗಿದೆ. ಕೇರಳ ಸವಾರಿ ಅಪ್ಲಿಕೇಶನ್ ನಿನ್ನೆ ಮಧ್ಯಾಹ್ನ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯವಾಯಿತು. ಇದು ಶೀಘ್ರದಲ್ಲೇ ಆಪ್ ಸ್ಟೋರ್‍ನಲ್ಲಿಯೂ ಲಭ್ಯವಾಗಲಿದೆ.
          ಇದರಲ್ಲಿ 302 ಆಟೋ ಮತ್ತು 226 ಟ್ಯಾಕ್ಸಿ ಕಾರುಗಳು ನೋಂದಣಿಯಾಗಿವೆ. 22 ಮಂದಿ ಮಹಿಳಾ ಚಾಲಕರಿರುವ ಟ್ಯಾಕ್ಸಿ ನೋಂದಾವಣೆಗೊಂಡಿದೆ. ಇನ್ನಷ್ಟು ಹೊಸ ಚಾಲಕರು ಕೇರಳ ಸವಾರಿಯ ವೆಬ್‍ಸೈಟ್ ಮತ್ತು ಅಪ್ಲಿಕೇಶನ್‍ನಲ್ಲಿ ನೋಂದಾಯಿಸಿಕೊಳ್ಳಬಹುದು. ಪ್ರಾಯೋಗಿಕವಾಗಿ ಮೂರು ತಿಂಗಳ ಅವಧಿಯ ಯೋಜನೆ ಇದಾಗಿದ್ದು, ಯಶಸ್ವಿಯಾದರೆ ಇತರೆಡೆಗೂ ವಿಸ್ತರಿಸಲಾಗುವುದು. ಎರಡನೇ ಹಂತದಲ್ಲಿ ಕೊಲ್ಲಂ, ಕೊಚ್ಚಿ, ತ್ರಿಶೂರ್, ಕೋಝಿಕ್ಕೋಡ್ ಮತ್ತು ಕಣ್ಣೂರು ನಗರಸಭೆ ವ್ಯಾಪ್ತಿಯಲ್ಲಿ ಸೇವೆ ಆರಂಭಿಸಲಾಗುವುದು. ಜನರಿಗೆ ನ್ಯಾಯಯುತ ಮತ್ತು ಯೋಗ್ಯ ಸೇವೆಯನ್ನು ಖಾತ್ರಿಪಡಿಸುವ ಮತ್ತು ಆಟೋ-ಟ್ಯಾಕ್ಸಿ ಕಾರ್ಮಿಕರಿಗೆ ನ್ಯಾಯಯುತ ಸಂಭಾವನೆ ನೀಡುವ ಉದ್ದೇಶದಿಂದ ಕೇರಳ ಸವಾರಿ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries