ಕಾಸರಗೋಡು: ಜಿಲ್ಲೆಯಲ್ಲಿ ಮಾದಕದ್ರವ್ಯ ಬೇಟೆ ಮುಂದುವರಿದಿದ್ದು, ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಮಂದಿಯನ್ನು ಬಂಧಿಸಿ, ಇವರಿಂದ ಎರಡು ವಾಹನ, ಗಾಂಜಾ, ಬ್ರೌನ್‍ಶುಗರ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಕಾಸರಗೋಡನ್ನು ಮಾದಕದ್ರವ್ಯ ಮುಕ್ಯ ಜಿಲ್ಲೆಯನ್ನಾಗಿಸುವ 'ಆಪರೇಶನ್ ಕ್ಲೀನ್ ಕಾಸರಗೋಡು'ಧ್ಯೇಯದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ನೇತೃತ್ವದಲ್ಲಿ ರಚಿಸಿರುವ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ. ಬದಿಯಡ್ಕ ಠಾಣೆ ಪೊಲೀಸರು ಮೂಕಂಪಾರೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 85ಗ್ರಾಂ ಗಾಂಜಾ, 18ಗ್ರಾಂ ಬ್ರೌನ್‍ಶುಗರ್, ಕಾರಿನ ಡ್ಯಾಶ್‍ನಲ್ಲಿರಿಸಿದ್ದ 85ಸಾವಿರ ರೂ. ನಗದು ವಶಪಡಿಸಿಕೊಂಡಿದ್ದು, ಬೇಳ ಕುಂಜಾರು ನಿವಾಸಿ ಅಬ್ದುಲ್ ರಹಮಾನ್ ಎಂಬತನನ್ನು ಬಂಧಿಸಿದ್ದಾರೆ.
ನೀಲೇಶ್ವರ ಮತ್ತು ಪಳ್ಳಿಕೆರೆ ರೈಲ್ವೆ ಗೇಟ್ ಸನಿಹ ನಡೆಸಿದ ಕಾರ್ಯಾಚರಣೆಯಲ್ಲಿ ಮಲಪ್ಪುರಂ ಕೊಂಡೋಟಿ ನಿವಾಸಿ ಮಹಮ್ಮದ್ ಅಜ್ಮಲ್, ಅರಿಕೋಡಿನ ಎನ್.ಎ ಅನ್‍ಸೀಲ್, ಮಲಪ್ಪುರಂನ ಫೈಜಾಸ್ ಎಂಬವರನ್ನು ಬಂಧಿಸಲಾಗಿದ್ದು, ಇವರಿಂದ 30ಗ್ರಾಂ ಬ್ರೌನ್‍ಶುಗರ್ ವಶಪಡಿಸಿಕೊಳ್ಳಲಾಗಿದೆ.ಹೊಸದುರ್ಗ ಡಿವೈಎಸ್‍ಪಿ ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಬೋವಿಕ್ಕಾನ ಪೊವ್ವಲ್‍ನ ಮಾಸ್ತಿಕುಂಡು ಎಂಬಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದ ನೆಕ್ರಾಜೆ ಚರ್ಲಡ್ಕ ನಿವಾಸಿ ಸಲೀಂ ಎಂಬಾತನನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ 35.5ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
'ಆಪರೇಶನ್ ಕ್ಲೀನ್ ಕಾಸರಗೋಡು'-ಜಿಲ್ಲೆಯ ವಿವಿಧೆಡೆ ದಾಳಿ, ಐವರ ಬಂಧನ, ಮಾದಕಪದಾರ್ಥ, ನಗದು, ವಾಹನ ವಶಕ್ಕೆ
0
ಆಗಸ್ಟ್ 10, 2022
Tags