ಮುಳ್ಳೇರಿಯ: ಅಸ್ತಿತ್ವಂ ಪ್ರತಿμÁ್ಠನವು ಹಲವು ಆಸ್ಪತ್ರೆಗಳ ಸಹಕಾರದೊಂದಿಗೆ ನಿರಂತರ 24 ವಾರಗಳ ಕಾಲ ಕಾಸರಗೋಡಿನ ವಿವಿಧ ಪ್ರದೇಶಗಳಲ್ಲಿ ನಡೆಸುತ್ತಿರುವ ನಿರಂತರ ಆರೋಗ್ಯ ಅಭಿಯಾನ ಎಂಬ ಸರಣಿಯ ಮೂರನೇ ಕಾರ್ಯಕ್ರಮ ರಾಷ್ಟ್ರೀಯ ಸೇವಾ ಭಾರತಿ ಕಾರಡ್ಕ ಘಟಕ ಹಾಗೂ ಕೆಎಂಸಿ ಅತ್ತಾವರ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಮ್ ನಟರಾಜ್ ನಾಯಕ್ ಉದ್ಘಾಟಿಸಿದರು. ರಾಷ್ಟ್ರೀಯ ಸೇವಾ ಭಾರತಿ ಕಾರಡ್ಕ ಘಟಕದ ಸಂತೋμï ಮುಳ್ಳೇರಿಯಾ, ಕೆಎಂಸಿ ಅತ್ತಾವರದ ಹೃದ್ರೋಗ ತಜ್ಞ ಅಮೋಘ ಉಪಸ್ಥಿತರಿದ್ದರು. ವಾಸುದೇವ ತಂತ್ರಿ ಕುಂಟಾರು ಆಶೀರ್ವಚನ ನೀಡಿದರು. ಅಸ್ತಿತ್ವಂ ಪ್ರತಿμÁ್ಠನದ ಸಹಸಂಚಾಲಕ ಮಹೇಶ್ ವಳಕ್ಕುಂಜ ಅವರು ಸೇವಾ ಭಾರತಿ ದತ್ತು ಪಡೆಯಲು ಉದ್ದೇಶಿಸಿರುವ ವಿದ್ಯಾರ್ಥಿಗೆ ಪ್ರತಿμÁ್ಠನದ ವತಿಯಿಂದ 10,000 ರೂಗಳ ಧನ ಸಹಾಯ ನೀಡುವುದಾಗಿ ಘೋಷಿಸಿದರು. ನಾರಾಯಣ ಶೆಟ್ಟಿ ಸ್ವಾಗತಿಸಿ, ರತ್ನಾಕರ ಎಂ ವಂದಿಸಿದರು.
ಅಸ್ತಿತ್ವಂ ಪ್ರತಿಷ್ಠಾನದ ನಿರಂತರ ಆರೋಗ್ಯ ಅಭಿಯಾನದ ಮೂರನೇ ಕಾರ್ಯಕ್ರಮ ಸಂಪನ್ನ
0
ಆಗಸ್ಟ್ 04, 2022