ಪೆರ್ಲ :ಗ್ರಾಮಪಂಚಾಯತುಗಳಿಗಿರುವ ಆರ್ಥಿಕ ಅನುದಾನ ಕಡಿತಗೊಳಿಸುತ್ತಿರುವ ಹಾಗೂ ಲೈಫ್ ಭವನ ನಿರ್ಮಾಣ ಯೋಜನೆಯನ್ನು ಬುಡಮೇಲುಗೊಳಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಹಂತ ಹಂತವಾಗಿ ನಿಲ್ಲಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧವಾಗಿ ಐಕ್ಯ ಪ್ರಜಾಪ್ರಭುತ್ವ ರಂಗದ ವತಿಯಿಂದ ಕೇರಳಾದ್ಯಂತ ಎಲ್ಲಾ ಗ್ರಾಮಪಂಚಾಯತು ಕಚೇರಿಗಳ ಮುಂಭಾಗದಲ್ಲಿ ಧರಣಿ ಆಯೋಜಿಸಲಾಗಿತ್ತು. ಇದರ ಅಂಗವಾಗಿ ಎಣ್ಮಕಜೆ ಗ್ರಾಮ ಪಂಚಾಯತಿನ ಮುಂಭಾಗದಲ್ಲಿ ಬುಧವಾರ ನಡೆದ ಧರಣಿಯನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ರವೀಂದ್ರನಾಥ ನಾಯಕ್ ಶೇಣಿ ಅಧ್ಯಕ್ಷತೆ ವಹಿಸಿದ್ದರು.ಬಿ.ಎಸ್.ಗಾಂಭೀರ್, ಹಮಿದಾಲಿ,ಹಮೀದ್ ಅಜಿಲಡ್ಕ, ಎ.ಕೆ.ಶೇರಿಫ್, ರಸಾಕ್ ನಲ್ಕ, ಅಬ್ದುಲ್ಲ ಕುರೆಡ್ಕ, ವಿಲ್ಫ್ರೆಡ್ ಡಿ.ಸೋಜ, ಆಯಿμÁ ಎ.ಎ.,ಝರಿನಾ ಮುಸ್ತಾಫ, ಕುಸುಮಾವತಿ ಮೊದಲಾದವರು ಪ್ರತಿಭಟನಾ ಧರಣಿಗೆ ನೇತೃತ್ವ ನೀಡಿದರು.
ಸಿದ್ದೀಕ್ ವಳಮುಗೇರ್ ಸ್ವಾಗತಿಸಿ ಅಬ್ದುಲ್ ರಹಿಮಾನ್ ವಂದಿಸಿದರು.
ಗ್ರಾಮ ಪಂಚಾಯತಿ ಅನುದಾನ ಕಡಿತಗೊಳಿಸುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಎಣ್ಮಕಜೆ ಯುಡಿಎಫ್ ನಿಂದ ಪ್ರತಿಭಟನಾ ಧರಣಿ
0
ಆಗಸ್ಟ್ 13, 2022