ಮಂಜೇಶ್ವರ: ಮನೆಯ ಟೆರೇಸಿನ ಮೇಲೆ ಗಾಂಜಾ ಕೃಷಿ ಮಾಡಿದ್ದ ಕುಬಣೂರು ಸನಿಹದ ಬೇಕೂರು ಲನ್ನಟಿಪಾರೆ ನಿವಾಸಿ ಕೆ.ಪಿ.ನಜೀಬ್ ಮೆಹ್‍ಫೂಸ್ (22) ಎಂಬಾತನನ್ನು ಎಸ್.ಐ ವಿ.ಕೆ.ಅನೀಶ್ ನೇತೃತ್ವದ ಪೆÇಲೀಸರ ತಂಡ ಬಂಧಿಸಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಸಲಾಗಿದೆ.
ಕುಂಬಳೆ-ಬಂಬ್ರಾಣ-ಕಳತ್ತೂರು ರಸ್ತೆಯಲ್ಲಿರುವ ಬಾಡಿಗೆ ಕ್ವಾರ್ಟರ್ಸ್‍ನ ಟೆರೇಸ್‍ನಲ್ಲಿ ಗಾಂಜಾ ಕೃಷಿ ನಡೆಯುತ್ತಿರುವ ಬಗ್ಗೆ ಮಂಜೇಶ್ವರ ತಹಸೀಲ್ದಾರ ಪಿ.ಪ್ರಮೋದ್ ಅವರಿಗೆ ಲಭಿಸಿದ ಮಾಹಿತಿ ಮೇರೆಗೆ ಪೆÇಲೀಸ್ ತಂಡ ಕಾರ್ಯಾಚರಣೆ ನಡೆಸಿದೆ.
ದಾಳಿ ಸಂದರ್ಭ ಎರಡು ತಿಂಗಳ ಬೆಳವಣಿಗೆ ಹೊಂದಿದ್ದ ಮೂರು ಗಾಂಜಾ ಗಿಡಗಳು ಪತ್ತೆಯಾಗಿವೆ. ಮಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾಗಿರುವ ನಜೀಬ್ ಮೆಹ್‍ಫೂಸ್ ಗಾಂಜಾ ಸೇವನೆ ವ್ಯಸನಿಯಾಗಿದ್ದು, ಗಾಂಜಾ ಮಾರಾಟ ಮಾಡಲು ಮತ್ತು ಸ್ವಂತ ಅಗತ್ಯಕ್ಕೆ ಬಳಸುತ್ತಿದ್ದ ಎಂದು ಶಂಕಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ತಂಡದಲ್ಲಿ ಹಿರಿಯ ಸಿವಿಲ್ ಪೆÇಲೀಸ್ ಅಧಿಕಾರಿ ಎಂ.ಸುಧೀರ್, ಸಿವಿಲ್ ಪೆÇಲೀಸ್ ಅಧಿಕಾರಿಗಳಾದ ಪಿ.ಅಜಯನ್, ಟಿ.ಕೆ.ಸದನ್, ಕೊಚ್ಚುರಾಣಿ ಜೊತೆಗಿದ್ದರು.