ಕಾಸರಗೋಡು: ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ತಡೆಯಲು ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ನಿಷೇಧಗೊಳಿಸಿ ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ 1617 ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು.
ತಪಾಸಣೆಯಲ್ಲಿ 1477.29ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಪ್ಲಾಸ್ಟಿಕ್ ನಿಷೇಧಿಸಿ ಹೊರಡಿಸಿರುವ ಆದೇಶ ಉಲ್ಲಂಘನೆ ಕಂಡು ಬಂದ 112 ಸಂಸ್ಥೆಗಳಿಂದ 1,56,300 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ. ಕಾರಡ್ಕ, ಪಿಲಿಕೋಡ್, ಚೆಮ್ನಾಡ್, ಕೋಡೋಂಬೇಳೂರ್, ಮೀಂಜ, ಬೇಡಡ್ಕ, ಬೆಳ್ಳೂರು, ಕುತ್ತಿಕೋಲ್, ಮೊಗ್ರಾಲ್‍ಪುತ್ತೂರು, ತ್ರಿಕರಿಪುರ, ಉದುಮ, ಕಾಸರಗೋಡು ಮತ್ತು ನೀಲೇಶ್ವರ ನಗರಸಭೆಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳು ಮೊದಲ ಹಂತದ ತಪಾಸಣೆಯನ್ನು ಪೂರ್ಣಗೊಳಿಸಿವೆ. ಏಕ-ಬಳಕೆಯ ಪ್ಲಾಸ್ಟಿಕ್‍ಗಳ ಮಾರಾಟ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ನಿಗ್ರಹಿಸಲು ತಪಾಸಣೆ ಮತ್ತು ದಂಡಗಳು ಮುಂಬರುವ ದಿನಗಳಲ್ಲಿ ತೀವ್ರವಾಗಿ ಮುಂದುವರಿಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ನಿಷೇಧಿತ ಪ್ಲಾಸ್ಟಿಕ್ ಬಳಕೆ: ತಪಾಸಣೆ ಚುರುಕು
0
ಆಗಸ್ಟ್ 24, 2022