HEALTH TIPS

ಕೋವಿಡ್‌ನಿಂದ ಸಾವು: ಗುಜರಾತ್‌ನಲ್ಲಿ ಅಧಿಕೃತ ಸಂಖ್ಯೆಗಿಂತ ಹೆಚ್ಚು ಸಾವು: ಅಧ್ಯಯನ

 

             ಗಾಂಧಿನಗರ: ಕೋವಿಡ್‌ ಸಾಂಕ್ರಾಮಿಕ ಕಾಣಿಸಿಕೊಂಡ ಮೊದಲ ವರ್ಷದಲ್ಲಿ ಗುಜರಾತ್‌ನ 162 ಪಟ್ಟಣ, ಪುರಸಭೆಗಳ ಪೈಕಿ 90ರಲ್ಲಿ ಭಾರಿ ಸಂಖ್ಯೆಯಲ್ಲಿ ಸೋಂಕು ಸಂಬಂಧಿತ ಸಾವು ಸಂಭವಿಸಿದೆ. ಇದು ರಾಜ್ಯದ ಅಧಿಕೃತ ಅಂಕಿ ಸಂಖ್ಯೆಗಳಿಗಿಂತಲೂ ಎರಡು ಪಟ್ಟು ಅಧಿಕ ಎಂದು ಬುಧವಾರ ಬಿಡುಗಡೆಯಾದ ಹೊಸ ಅಧ್ಯಯನವೊಂದು ಹೇಳಿದೆ.

                 2021ರ ಮೇನಲ್ಲಿ ಡೆಲ್ಟಾ ಕಾರಣದಿಂದ ಕಾಣಿಸಿಕೊಂಡ ಎರಡನೇ ಅಲೆಯು ಉತ್ತುಂಗಕ್ಕೇರುವ ಮೊದಲೇ ಗುಜರಾತ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಸಾವು ಸಂಭವಿಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

                ಹಾರ್ವರ್ಡ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಸಂಶೋಧಕರು ಮತ್ತು ಭಾರತೀಯ ಸಹಯೋಗಿಗಳಿಂದ ಈ ಅಧ್ಯಯನ ನಡೆದಿದೆ. ಕೋವಿಡ್-19 ಕಾರಣದಿಂದ ಭಾರತದಲ್ಲಿ ಸಂಭವಿಸಿದ ಸಾವುಗಳ ಕುರಿತ ವಾಸ್ತವವನ್ನು ಹೊಸ ಅಧ್ಯಯನ ಬಹಿರಂಗಪಡಿಸಿದೆ.

             ಗಾಂಧಿನಗರ ಸೇರಿದಂತೆ 90 ಪುರಸಭೆಗಳಿಂದ ಪಡೆದ ನಾಗರಿಕ ಮರಣ ನೋಂದಣಿ ದಾಖಲೆಗಳನ್ನು ಅವಲಂಬಿಸಿ, 2020ರ ಮಾರ್ಚ್ ಮತ್ತು 2021ರ ಏಪ್ರಿಲ್ ನಡುವೆ ಈ ಅಧ್ಯಯನ ನಡೆಸಲಾಗಿದೆ. ಈ ಅವಧಿಯಲ್ಲಿ 21,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದವು ಎಂದು ವರದಿ ಹೇಳುತ್ತದೆ. ಆದರೆ, ಗುಜರಾತ್‌ನ ಅಧಿಕೃತ ಕೋವಿಡ್ ಮಾಹಿತಿಯು 10,000 ಸಾವು ಸಂಭವಿಸಿದ್ದಾಗಿ ಹೇಳಿದೆ. ಇದು ಅಧಿಕೃತ ಸಂಖ್ಯೆಗಿಂತಲೂ ಎರಡು ಪಟ್ಟು ಅಧಿಕ.

             ಭಾರತದ ಕೋವಿಡ್ ಸಾವಿನ ವರದಿಯು ಕಳೆದ ಎರಡು ವರ್ಷಗಳಿಂದ ವಿವಾದಾತ್ಮಕ ವಿಷಯವಾಗಿಯೇ ಉಳಿದಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಅಧ್ಯಯನಗಳನ್ನು ಕಟುವಾಗಿ ವಿರೋಧಿಸುತ್ತಲೇ ಬಂದಿದೆ. ಇನ್ನೊಂದೆಡೆ, ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ಸಾವಿನ ಅಧಿಕೃತ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯನ್ನು ಬಹಿರಂಗಗೊಳಿಸಿದೆ.

             ಕೋವಿಡ್‌ 19ಗೆ ಸಂಬಂಧಿಸಿದ ಸಾವುಗಳ ನಿಖರವಾದ ಮಾಹಿತಿ ನೀಡಬೇಕಿದ್ದರೆ, ರೋಗಿಗಳು ಕೋವಿಡ್‌ ಆರೋಗ್ಯ ಸೇವೆ ಪಡೆದಿರಬೇಕು, ಆರೋಗ್ಯ ಸೇವೆ ಒದಗಿಸುವವರು ಕೋವಿಡ್ -19 ಅನ್ನು ಪತ್ತೆಹಚ್ಚಲು ಅಗತ್ಯವಾದ ಜ್ಞಾನ ಮತ್ತು ಕ್ಲಿನಿಕಲ್ ಅಥವಾ ಪ್ರಯೋಗಾಲಯ ಸಾಧನಗಳನ್ನು ಹೊಂದಿರಬೇಕು, ಸಾವಿನ ಪ್ರಮಾಣಪತ್ರಗಳಲ್ಲಿ ಕೋವಿಡ್‌ ಕಾರಣವನ್ನು ಉಲ್ಲೇಖಿಸುವವರು ಕೋವಿಡ್‌ಗೆ ಸಂಬಂಧಿಸಿದ ಅಗತ್ಯವಾದ ತರಬೇತಿಯನ್ನು ಹೊಂದಿರಬೇಕು.

             ಇದರಲ್ಲಿ ಒಂದು ಅಥವಾ ಹೆಚ್ಚಿನ ಮಾನದಂಡಗಳು ತಪ್ಪಿಹೋದರೂ, ಕೋವಿಡ್‌ ಸಂಬಂಧಿತ ನಿಖರ ಸಾವಿನ ಸಂಖ್ಯೆಯಲ್ಲೂ, ಅಧಿಕೃತ ಸಂಖ್ಯೆಯಲ್ಲೂ ವ್ಯತ್ಯಾಸ ಉಂಟಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries