HEALTH TIPS

ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಸಂಭ್ರಮದ ಶ್ರೀಕೃಷ್ಣಜನ್ಮಾಷ್ಟಮೀ ಮಹೋತ್ಸವ ಸಂಪನ್ನ


          ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು ಶುಕ್ರವಾರ ಶ್ರೀಕೃಷ್ಣಜನ್ಮಾಷ್ಟಮೀ ಮಹೋತ್ಸವವು ಸಂಪನ್ನವಾಯಿತು.
        ಸಂಜೆ 5.ಕ್ಕೆ  ದೀಪೆÇೀಜ್ವಲನ, ಗುರುವಂದನೆ, ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರತಿ ತಿಂಗಳು ನಡೆಯುವಂತೆ ಗೋಪೂಜೆ ಹಾಗೂ ಗೋಪಾಲಕೃಷ್ಣಪೂಜೆ ನೆರವೇರಿತು. ಭಗವಾನ್ ಶ್ರೀಕೃಷ್ಣನೊಡನೆ ಧರೆಗವತರಿಸಿದ ಆದಿಮಾಯೆಯನ್ನು ಸಂಪ್ರಾರ್ಥಿಸಿ ಶ್ರೀ ದುರ್ಗಾಪೂಜೆ, ಚಂಡೀಸಪ್ತಶತೀ ಪಾರಾಯಣ ನಡೆಯಿತು.ವಿಷ್ಣುಸಹಸ್ರನಾಮ,ಲಲಿತಾಸಹಸ್ರನಾಮ,ಲಕ್ಷ್ಮೀನಾರಾಯಣಹೃದಯ ಪಾರಾಯಣಗಳನ್ನು ನಡೆಸಲಾಯಿತು. ಗೀತಾಜ್ಞಾನಯಜ್ಞಸಮಿತಿಯ ಅಗಲ್ಪಾಡಿ-ಪೆರ್ಲ ಘಟಕದ ಸದಸ್ಯರು ಶ್ರೀಮದ್ಭಗವದ್ಗೀತಾಪಾರಾಯಣ ನಡೆಸಿದರು. ಪಾಣಾಜೆ-ರಣಮಂಗಲದ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯ ಸದಸ್ಯರು ಭಜನಾ ಸೇವೆ ನಡೆಸಿಕೊಟ್ಟರು.ರಾತ್ರಿ 8.30 ಕ್ಕೆ ಜನ್ಮಾಷ್ಟಮೀ ಮಹೋತ್ಸವದ ಪೂರ್ವಾಂಗವಾಗಿ ಗೋಪಾಲಕೃಷ್ಣಪೂಜೆ, ದುರ್ಗಾ ಪೂಜೆಯ ಮಂಗಳಾರತಿ ನಡೆದು ನಂತರ ಉಪಾಹಾರ ವಿತರಣೆ ನಡೆಯಿತು.



         ರಾತ್ರಿ 10.ಕ್ಕೆ ಶ್ರೀಕೃಷ್ಣಜನ್ಮಾಷ್ಟಮೀ ಕಲ್ಪೋಕ್ತಪೂಜೆ ಪ್ರಾರಂಭಗೊಂಡಿತು.ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ ಸದಸ್ಯರು ಭಜನಾ ಸೇವೆ ನಡೆಸಿಕೊಟ್ಟರು. ಮಹಾಮಂಗಳಾರತಿ,ಅಘ್ರ್ಯಪ್ರದಾನಗಳೊಂದಿಗೆ ಸಂಭ್ರಮದಿಂದ ಶ್ರೀಕೃಷ್ಣಜನ್ಮೋತ್ಸವ ಸಂಪನ್ನಗೊಂಡಿತು. ನಂತರ ಮಂಗಲಘೋಷಪೂರ್ವಕ ಭಗವಾನ್ ಶ್ರೀಕೃಷ್ಣನಿಗೆ ಆಂದೋಲಿಕಾಮಹೋತ್ಸವ (ತೊಟ್ಟಿಲುಮಹೋತ್ಸವ) ನಡೆಯಿತು.ಜೋಗುಳಹಾಡಿನ ಹಿನ್ನೆಲೆಯೊಂದಿಗೆ ಭಕ್ತಾದಿಗಳು ತೊಟ್ಟಿಲಲ್ಲಿ ಪವಡಿಸಿದ ಭಗವಾನ್ ಬಾಲಕೃಷ್ಣನನ್ನು ಭಕ್ತಿಪೂರ್ವಕವಾಗಿ ತೂಗಿ ಧನ್ಯತಾಭಾವವನ್ನು ಹೊಂದಿದರು.ಶ್ರೀದೇವರ ಶಯನೋತ್ಸವದೊಂದಿಗೆ ಸಂಭ್ರಮದ ಜನ್ಮಾಷ್ಟಮೀ ಮಹೋತ್ಸವ ಸಂಪನ್ನಗೊಂಡಿತು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries