ಕಾಸರಗೋಡು: ಕೇರಳದಲ್ಲಿ ನಡೆದಿರುವ ಉಪಚುನಾವಣೆಯಲ್ಲಿ ಐಕ್ಯರಂಗದ ಐತಿಹಾಸಿಕ ಗೆಲುವನ್ನು ಅರಗಿಸಿಕೊಳ್ಳಲಾಗದೆ ಸಿಪಿಎಂ ಹತಾಶೆಯಿಂದ ವರ್ತಿಸುತ್ತಿರುವುದಾಗಿ ಐಕ್ಯರಂಗ ಸಂಚಾಲಕ ಎಂ.ಎಂ ಹಸನ್ ತಿಳಿಸಿದ್ದಾರೆ.
ಅವರು ಕಾಸರಗೋಡು ನಗರಸಭಾಂಗಣದಲ್ಲಿ ಐಕ್ಯರಂಗ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಂಡಿಸಲಾದ ಮಸೂದೆಯನ್ನು ಐಕ್ಯರಂಗ ವಿರೋಧಿಸಲಿದೆ. ಪಿಣರಾಯಿ ವಿಜಯನ್ ಆಡಳಿತದಿಂದ ಭ್ರಮನಿರಸನಗೊಂಡಿರುವ ಕೆಲವೊಂದು ಸಣ್ಣ ಪಕ್ಷಗಳು ಐಕ್ಯರಂಗ ಸೇರಲು ಹಾತೊರೆಯುತ್ತಿರುವುದಾಗಿ ತಿಳಿಸಿದರು.
ಐಕ್ಯರಂಗ ಜಿಲ್ಲಾ ಅಧ್ಯಕ್ಷ ಸಿ.ಟಿ ಅಹ್ಮದ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಟಿ.ಇ ಅಬ್ದುಲ್ಲಾ, ಪಿ.ಕೆ. ಫೈಸಲ್, ಎಂ.ಪಿ. ಜೋಸೆಫ್, ಜೆಟೊ ಜೋಸೆಫ್, ಹರೀಶ್ ಬಿ. ನಂಬಿಯಾರ್, ಕೆ.ಪಿ. ಕುಞÂಕಣ್ಣನ್, ಹಕೀಂ ಕುನ್ನಿಲ್, ಎ. ಅಬ್ದುಲ್ ರೆಹಮಾನ್, ಕಲ್ಲಟ್ರ ಮಾಹಿನ್ ಹಾಜಿ, ಪಿ.ಎ. ಅಶ್ರಫಲಿ, ಅಂತಕ್ಸ್ ಜೋಸೆಫ್, ಕೆ. ನೀಲಕಂಠನ್, ವಿ.ಕಮ್ಮಾರನ್, ಪಿ.ಪಿ. ಅಡಿಯೋಡಿ, ಪಿ. ಕರುಣಾಕರನ್, ಮಧು ಮಾನ್ಯತ್, ಅಮೃತಾ ಪಿ., ಸತ್ಯನಾರಾಯಣನ್ ಪಿ.ಕೆ., ಕೆ. ಮುಹಮ್ಮದ್‍ಕುಞÂ, ಪಿ.ಎಂ. ಮುನೀರ್ ಹಾಜಿ, ಮೂಸಾ ಬಿ.ಚೆರ್ಕಳ, ಎ.ಎಂ. ಕಡವತ್, ವಿ.ಆರ್. ವಿದ್ಯಾಸಾಗರ್, ವಕೀಲ ಅಬ್ರಹಾಂ ಠಾಣಕಾರ, ಕರುಣ್ ತಾಪ ಮುಂತಾದವರು ಉಪಸ್ಥಿತರಿದ್ದರು.ಪ್ರಧಾನ ಸಂಚಾಲಕ ಎ. ಗೋವಿಂದನ್ ನಾಯರ್ ಸ್ವಾಗತಿಸಿದರು.
ಐಕ್ಯರಂಗ ಬೆಳವಣಿಗೆಯಿಂದ ಸಿಪಿಎಂಗೆ ಹತಾಶೆ: ಎಂ.ಎಂ ಹಸನ್
0
ಆಗಸ್ಟ್ 25, 2022
Tags