ತಿರುವನಂತಪುರ: ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂದೂಗಳಿಗೆ ಸಂಘಟನೆಯ ಅಗತ್ಯವಿದೆ ಎಂದು ಖ್ಯಾತ ನಿರ್ದೇಶಕ ರಾಮಸಿಂಹನ್ ಅಬೂಬಕರ್ ಹೇಳಿರುವರು. ಮುಸ್ಲಿಂ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಲೀಗ್ ಅಸ್ತಿತ್ವದಲ್ಲಿದೆ. ಕ್ರಿಶ್ಚಿಯನ್ ಸಮುದಾಯವು ಕೇರಳ ಕಾಂಗ್ರೆಸ್ ಸೇರಿದಂತೆ ಇತರ ಸಂಘಟನೆಗಳನ್ನು ಹೊಂದಿದೆ. ಬಿಜೆಪಿ ಜಾತ್ಯತೀತ ಪಕ್ಷ. ಇದು ನಮಗೆ ಸಾಕಾಗುವುದಿಲ್ಲ, ರಾಜಕೀಯ ನಿಲುವು ತೆಗೆದುಕೊಳ್ಳುವವರು ಯಾರಾದರೂ ಇದ್ದಾರೆಯೇ ಎಂದು ಅವರು ಫೇಸ್‍ಬುಕ್ ಪೋಸ್ಟ್ ಮೂಲಕ ಪ್ರಶ್ನಿಸಿದ್ದಾರೆ.
ಇತರರು ಧರ್ಮವನ್ನು ಸಾಧಿಸಲು ಸಾಧ್ಯವಾದರೆ, ನಾವೂ ಮಾಡಬಹುದು. ಹಿಂದೂಗಳ ಧ್ವನಿ ಮತ್ತು ಹಕ್ಕುಗಳನ್ನು ಗೆಲ್ಲಲು ಶಕ್ತಿ ಬೇಕು. ರಾಮಸಿಂಹನ ಅಬೂಬಕರ್ ಮಾತನಾಡಿ, ಸಂಘಟನೆಯ ಆಗ್ರಹ ಯಾರ ವಿರುದ್ದವೂ ಹೋರಾಟವಲ್ಲ, ಸ್ವಾಭಿಮಾನ ಕಾಪಾಡುವುದು. ಸಂಘಟನೆಯ ನಾಯಕತ್ವ ಸ್ಥಾನದ ಗುಲಾಮರು ಇಲ್ಲ ಎಂದು ತಿಳಿಸಿದರು.
ಯಾರು ಮುಂಚೂಣಿಯಲ್ಲಿರಬೇಕು ಎಂಬುದನ್ನು ನೀವು ಸೂಚಿಸಬಹುದು. ಸಂತರು, ದೇಶಭಕ್ತರು ಹಾಗೂ ಉನ್ನತ ಸ್ಥಾನಮಾನದ ವ್ಯಕ್ತಿಗಳನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳಬೇಕು ಎಂದು ಬರೆದಿದ್ದಾರೆ. ಈ ಪೋಸ್ಟ್‍ಗೆ 1 ಲಕ್ಷ ಲೈಕ್‍ಗಳು ಬಂದರೆ, ನಾನು ಮುನ್ನಡೆಯುತ್ತೇನೆ ಎಂದೂ ಬರೆದಿದ್ದಾರೆ. ಆನ ಬೆಂಬೆಲ ಇಲ್ಲದಿದ್ದರೆ ನನ್ನೀ ಅಭಿಪ್ರಾಯ ತಿರಸ್ಕರಿಸಲಾಗುತ್ತದೆ. ಅದು ನಿಮಗೆ ಬಿಟ್ಟ ವಿಚಾರ ಎಂದರು.
ಇದು ಸಾಧ್ಯವಾಗಬೇಕಾದರೆ ಕೇವಲ ಲೈಕ್ ಸಾಕಾಗದೇ ಶೇರ್ ಮಾಡಿ 1 ಲಕ್ಷ ಲೈಕ್ಸ್ ತಲುಪಬೇಕು. ನಿಮ್ಮಿಂದ ಸಾಧ್ಯವೆ? ಹೀಗಾದರೆ ಬಲಿಷ್ಠ ಸಂಘಟನೆಯಾಗುವುದು ನಿಶ್ಚಿತ. ಇಲ್ಲದಿದ್ದರೆ, ಅμÉ್ಟ. ಒಮ್ಮೆ ಪ್ರಯತ್ನಿಸಿ. ಒಂದು ಲಕ್ಷ ಲೈಕ್ಸ್. ಆದರೆ ಬಲವಾದ ಸಂಘಟನೆ ಹುಟ್ಟುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ರಾಮಸಿಂಹನ್ ಅಬೂಬಕರ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದು, ಒಂದು ಲಕ್ಷ ಲೈಕ್ಸ್ ಬಂದರೆ ಕೇರಳದಲ್ಲಿ ಇಂತಹ ಸಂಘಟನೆ ಬೇಕೇ ಬೇಕು ಎಂದರ್ಥ.
ಹಿಂದೂ ಸಂಘಟನೆಯ ಅಗತ್ಯವಿದೆ’; ಸಂತರು ಮತ್ತು ಉನ್ನತ ನಾಯಕರು ಮುಂದಾಗಬೇಕು: ರಾಮಸಿಂಹನ್ ಅಬೂಬಕರ್
0
ಆಗಸ್ಟ್ 17, 2022