ಕುಂಬಳೆ: ಕುಂಬಳೆ ಕೃಷಿ ಭವನ ಮತ್ತು ಮೃಗಾಸ್ಪತ್ರೆಯಲ್ಲಿ ರಾಷ್ಟ್ರ ಧ್ವಜವನ್ನು ಕೆಳಮುಖವಾಗಿ ಕಿಡಿಕಿಯ ಸರಳಿಗೆ ಕಟ್ಟಿದ್ದು ರಾಷ್ಟ್ರಧ್ವಜದ ನೀತಿ ಸಂಹಿತೆಯನ್ನು ಉಲ್ಲಂಘಿsಸಿರುವುದು ಕಂಡುಬಂದಿದೆ. ದ್ವಜ ಸ್ತಂಭವೇ ಇಲ್ಲದ ಈ ಕಚೇರಿಗಳಲ್ಲಿ ಸ್ವಾತಂತ್ರ್ಯ ದಿನವಾದ ನಿನ್ನೆ ಯಾವೊಬ್ಬ ಉನ್ನತ ಅಧಿಕಾರಿಯು ಕಚೇರಿಗೆ ಹಾಜರಾಗಲೂ ಇಲ್ಲ ಮತ್ತು ಈ ಅಮೃತಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಗಳಾಗಿಲ್ಲ. ಕಳೆದ 13 ರಂದು ಕಚೇರಿಯ ತಾತ್ಕಾಲಿಕ ಸಿಬ್ಬಂದಿಯೊಬ್ಬರು ಧ್ವಜದ ಮಹತ್ವವನ್ನರಿಯದೆ ಕಿಡಿಕಿಯ ಸರಳಿಗೆ ಕೆಳಮುಖವಾಗಿ ಧ್ವಜಕಟ್ಟಿ ಬಳಿಕ ನಾಪತ್ತೆಯಾಗಿದ್ದಾರೆ.
ಮಂಜೇಶ್ವರ ಬ್ಲಾಕ್ ಪಂಚಾಯತಿನ ಅಧೀನತೆಯಲ್ಲಿ ಮತ್ತು ಕುಂಬಳೆ ಗ್ರಾಮ ಪಂಚಾಯತಿನ ನಿಯಂತ್ರಣದಲ್ಲಿ ಬರುವ ಪ್ರಮುಖ ಸÀರ್ಕಾರಿ ಕಾರ್ಯಾಲಯಗಳಾದ ಕೃಷಿ ಭವನ, ಮೃಗಾಸ್ಪತ್ರೆ ಮತ್ತು ಗ್ರಾಮ ಕಚೇರಿ, ಕೇರಳ ವಾಟರ್ ಅಥೋರಿಟಿ, ಮತ್ಸ್ಯ ಭವನ್, ...ಇತ್ಯಾದಿ ಸೇರಿ ಹೆಚ್ಚಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ದ್ವಜಸ್ತಂಭಗಳಿಲ್ಲದಿರುವುದು ಕುಂಬಳೆ ಪಂಚಾಯತ್ ದುರಾಡಳಿತದ ಪ್ರತಿಫಲನವಾಗಿದೆ.
ಕುಂಬಳೆ ಕೃಷಿ ಭವನ ಸೇರಿ ಇತರ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಪ್ರತಿವರ್ಷ ಸರಕಾರದ ವಾರ್ಷಿಕ ಮುಂಗಡಪತ್ರದಲ್ಲಿ ನೂರಾರು ಕೋಟಿ ರೂಪಾಯಿಗಳ ಅನುದಾನ ಲಭಿಸುತ್ತಿರುವ ಮತ್ತು ಪ್ರತಿ ತಿಂಗಳು ಸುಮಾರು ಲಕ್ಷದಷ್ಟು ಸಂಬಳ ಪಡೆಯುವ ಉನ್ನತ ಅಧಿಕಾರಿಗಳಿದ್ದರೂ ಕೂಡ ಕಚೇರಿ ಒಂದು ದ್ವಜ ಸ್ತಂಭ ಸ್ಥಾಪಿಸಲು ಸಾದ್ಯವಾಗಿಲ್ಲವೆಂಬುದು ಅಚ್ಚರಿಮೂಡಿಸಿದೆ.
ಈ ಕಚೇರಿಗಳಲ್ಲಿ ಕಳೆದ ಹಲವಾರು ವರ್ಷಗಳಿಂದಲೂ ಈ ರೀತಿ ರಾಷ್ಟ್ರಧ್ವಜಕ್ಕೆ ಅಗೌರವ ತೋರುತಿದ್ದು ಈ ವಿಷಯವನ್ನು ಮಾಧ್ಯಮಗಳು ಮತ್ತು ಸಾಮಾಜಿಕ ತಾಣಗಳಲ್ಲಿ ಪೋಟೋ ಸಹಿತ ಸುದ್ದಿ ನೀಡಿದ ಹಿನ್ನಲೆಯಲ್ಲಿ ಕುಂಬಳೆ ಪಂಚಾಯತ್ ಮಾಜಿ ಅಧ್ಯಕ್ಷರ ಗಮನಕ್ಕೆ ತಂದಿದ್ದು ಅವರು, ಕಚೇರಿಗಳ ಉನ್ನತ ಅಧಿಕಾರಿಗಳನ್ನು ತನ್ನ ಆಫೀಸಿಗೆ ಕರೆದು ಎಚ್ಚರಿಕೆಯನ್ನು ನೀಡಿದ್ದರು.