ತಿರುವನಂತಪುರ: ಸಾಕು ನಾಯಿಗೆ ಸ್ನಾನ ಮಾಡದ ಕಾರಣಕ್ಕೆ ಗನ್ ಮ್ಯಾನ್ ನನ್ನು ಅಮಾನತು ಮಾಡಿದ್ದ ಎಸ್ ಪಿ ನವನೀತ್ ಶರ್ಮಾ ಅವರನ್ನು ಠಿಔಲೀಸ್ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ದೂರಸಂಪರ್ಕ ಎಸ್‍ಪಿ ನವನೀತ್ ಶರ್ಮಾ ಗನ್‍ಮ್ಯಾನ್ ಆಕಾಶ್ ಅವರನ್ನು ಅಮಾನತುಗೊಳಿಸಿದ್ದರು. ಮನೆಯ ನಾಯಿಗೆ ಸ್ನಾನ ಮಾಡಿಸದ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ದೂರಲಾಗಿತ್ತು. ನಂತರ ಅದೇ ದಿನ ಎಐಜಿ ಪೋಲೀಸರನ್ನು ವಾಪಸ್ ಕರೆಸಿಕೊಂಡರು.
ಸುಳ್ಳು ವರದಿ ತಯಾರಿಸಿ, ಆಕಾಶ್ ಅವರನ್ನು ಅಮಾನತು ಮಾಡಲಾಗಿತ್ತು. ಯಾರೂ ಇಲ್ಲದ ವೇಳೆ ಕ್ವಾರ್ಟರ್ಸ್ ನೊಳಗೆ ನುಗ್ಗಿ ಇಲೆಕ್ಟ್ರೋನಿಕ್ಸ್ ಉಪಕರಣಗಳನ್ನು ಹಾಳುಗೆಡವಿದನೆಂದು ಸುಳ್ಳು ಆಪಾದನೆ ಮಾಡಲಾಗಿತ್ತು. ಬಳಿಕ ದೂರು ಕೇಳಿಬಂದ ನಂತರ ಎಐಜಿ ಅನೂಪ್ ಕುರುವಿಳ ಗನ್ ಮ್ಯಾನ್ ಅಮಾನತನ್ನು ಹಿಂಪಡೆದು ಎಸ್ಪಿ ನವನೀತ್ ಶರ್ಮಾ ಅವರನ್ನು ವರ್ಗಾವಣೆ ಮಾಡಲಾಗಿದೆ.
ಸಾಕು ನಾಯಿಗೆ ಸ್ನಾನ ಮಾಡಿಸದ ಕಾರಣಕ್ಕೆ ಗನ್ ಮ್ಯಾನ್ ನನ್ನು ಅಮಾನತು ಮಾಡಿದ್ದ ಎಸ್ ಪಿ ನವನೀತ್ ಶರ್ಮಾಗೆ ವರ್ಗಾವಣೆ
0
ಆಗಸ್ಟ್ 07, 2022
Tags