ಮಂಜೇಶ್ವರ: ಮಂಜೇಶ್ವರ, ಕುಂಜತ್ತೂರು ಪ್ರದೇಶದಲ್ಲಿ ಯು.ಡಿ.ಎಫ್ ಕಾರ್ಯಕರ್ತರನ್ನು ಸುಳ್ಳು ಆರೋಪ ಹೊರಿಸಿ ಜೈಲಿಗಟ್ಟುವ ಮೂಲಕ ಮಂಜೇಶ್ವರ ಪೋಲೀಸರ ಹಿಂಸಾಚಾರ ನಡೆಸುತ್ತಿದ್ದು, ಇದು ಮುಂದುವರಿದರೆ ಅದರ ಪರಿಣಾಮ ಭೀಕರವಾಗಲಿದೆ ಎಂದು ಯು.ಡಿ.ಎಫ್ ಮಂಜೇಶ್ವರ ಕ್ಷೇತ್ರ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಪೋಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಕೆಲವು ತಿಂಗಳ ಹಿಂದೆ ಕೊಲೆಯಾದ ಮುಗುವಿನ ಅಬೂಬಕರ್ ಸಿದ್ದೀಕ್ ಹತ್ಯೆಯ ಕುರುಹು ಪತ್ತೆ ಮಾಡಲು ಪೋಲೀಸರಿಗೆ ಸಾಧ್ಯವಾಗಿಲ್ಲ. ಮಂಜೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಫಿಯಾ ಗ್ಯಾಂಗ್ ಗಳು ಸುಳಿದಾಡುತ್ತಿವೆ. ಹದಿಹರೆಯದವರನ್ನು ಗುರಿಯಾಗಿಸಿಕೊಂಡು ಗಾಂಜಾ ಡ್ರಗ್ಸ್ ಗ್ಯಾಂಗ್‍ಗಳು ಯಾವುದೇ ಮುಚ್ಚುಮರೆಯಿಲ್ಲದೆ ವ್ಯಾಪಾರ ಮಾಡುತ್ತಿದ್ದು, ಪೋಲೀಸರು ನೋಡಿಯೂ ನೋಡದಂತೆ ನಟಿಸುತ್ತಿದ್ದಾರೆ. ಇಂತಹ ಅಮಾನುಷ ಕೃತ್ಯಗಳು ನಡೆಯುತ್ತಿದ್ದಾಗ ಜನರ ಗಮನ ಬೇರೆಡೆ ಸೆಳೆಯಲು ಪೋಲೀಸರು ಅಮಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗೆ ತಳ್ಳುವುದು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಯು.ಡಿ.ಎಫ್ ನೇತೃತ್ವದಲ್ಲಿ ಪೋಲೀಸ್ ಠಾಣೆ ಮೆರವಣಿಗೆ ಸೇರಿದಂತೆ ಆಂದೋಲನ ನಡೆಸಲಾಗುವುದು ಎಂದು ಮುಖಂಡರು ಮಾಹಿತಿ ನೀಡಿರುವರು.
ಮಂಜೇಶ್ವರ ಕ್ಷೇತ್ರದ ಯು.ಡಿ.ಎಫ್ ಅಧ್ಯಕ್ಷ ಟಿ.ಎ. ಮೂಸಾ ಅಧ್ಯಕ್ಷತೆಯಲ್ಲಿ ಸೇರಿದ ಯು.ಡಿ.ಎಫ್. ಸಭೆಯನ್ನು ಡಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಸಭೆಯಲ್ಲಿ ಮುಖಂಡರಾದ ಶಾಸಕ ಎ.ಕೆ.ಎಂ.ಅಶ್ರಫ್, ಎಂ.ಬಿ.ಯೂಸುಫ್ ಹಾಜಿ, ಅಜೀಜ್ ಮರಿಕೆ, ಎಂ.ಅಬ್ಬಾಸ್, ಲಕ್ಷ್ಮಣ ಪ್ರಭು ಕುಂಬಳೆ, ಎ.ಕೆ.ಆರೀಫ್, ಅಬ್ಬಾಸ್ ವಾನಂದೆ, ಎಂ.ಎಸ್.ಎ.ಸತ್ತಾರ್ ಹಾಜಿ, ರವಿ ಪೂಜಾರಿ, ಮೋಹನರಾಯರು, ಸೈಯದ್ ಸೈಫುಲ್ಲಾ ತಂಙಳ್, ಪಿ. ಅಬ್ದುಲ್ಲ ಕುಂಞÂ್ಞ ಮುಕಾರಿಕಂಡ ಉಪಸ್ಥಿತರಿದ್ದು ಮಾತನಾಡಿದರು. ಸಂಚಾಲಕ ಮಂಜುನಾಥ ಆಳ್ವ ಸ್ವಾಗತಿಸಿ, ಎಂ. ಅಬ್ಬಾಸ್ ವಂದಿಸಿದರು.
ಯು.ಡಿ.ಎಫ್ ಕಾರ್ಯಕರ್ತರ ಮೇಲಿನ ಪೆÇಲೀಸ್ ಹಿಂಸಾಚಾರವನ್ನು ನಿಲ್ಲಿಸದಿದ್ದರೆ ಪರಿಣಾಮ ತೀವ್ರವಾಗಿರುತ್ತದೆ: ಯು.ಡಿ.ಎಫ್
0
ಆಗಸ್ಟ್ 13, 2022