ಬರ್ಮಿಂಗ್ಹ್ಯಾಮ್: ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಹಾಕಿ ಪುರುಷರ ವಿಭಾಗದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 0-7 ಗೋಲುಗಳ ಅಂತರದಿಂದ ಸೋಲು ಕಂಡಿದೆ.
ಫೈನಲ್ಸ್ ಪಂದ್ಯದ ಮೇಲೆ ಆಸ್ಟ್ರೇಲಿಯಾ ಸಂಪೂರ್ಣ ಹಿಡಿತ ಸಾಧಿಸಿದ್ದು, ಬ್ಲೇಕ್ ಗೋವರ್ಸ್, ನಾಥನ್ ಎಫ್ರಾಮ್ಸ್, ಜಾಕೋಬ್ ಆಂಡರ್ಸನ್, ಟಾಮ್ ವಿಕ್ಹ್ಯಾಮ್ ಮತ್ತು ಫಿನ್ ಒಗಿಲ್ವಿ ಆಸ್ಟ್ರೇಲಿಯಾ ಪರ ಗೋಲು ದಾಖಲಿಸಿದರು.
ಆಸ್ಟ್ರೇಲಿಯಾ ಆಟಗಾರರ ಎದುರು ಭಾರತೀಯ ಕ್ರೀಡಾಪಟುಗಳು ಗೋಲು ದಾಖಲಿಸಲು ಹರಸಾಹಸ ಪಡಬೇಕಾಯಿತು. ಪರಿಣಾಮ ಭಾರತ ರಜತ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.