ಕೊಯಮತ್ತೂರು: ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಈಶಾ ಲೀಡರ್‌ಷಿಪ್ ಅಕಾಡೆಮಿ ವತಿಯಿಂದ 'ಬ್ಲೂಪ್ರಿಂಟ್ ಫಾರ್ ಆಕ್ಟೀವ್ ಟ್ರಾನ್ಸ್‌ಫಾರ್‌ಮೇಷನ್' ವಿಷಯದ ಮೇಲೆ, 'ಹ್ಯೂಮನ್ ಈಸ್ ನಾಟ್ ಎ ರಿಸೋರ್ಸ್ (ಮಾನವರು ಸಂಪನ್ಮೂಲವಲ್ಲ )' (HINAR 2022) ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಮೂಲಕ ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನದ ಕುರಿತು ಹಲವು ವಿಷಯಗಳ ಚರ್ಚೆಯಾಯಿತು.
ಸದ್ಗುರುಗಳ ನೇತೃತ್ವದ ಜಾಗತಿಕ ಅಭಿಯಾನವಾದ 'ಮಣ್ಣು ಉಳಿಸಿ' ಈಗ ಪ್ರಪಂಪಂಚದಾದ್ಯಂತ 390 ಕೋಟಿ ಜನರನ್ನು ಮುಟ್ಟಿದ್ದು, ಇದೊಂದು ಪ್ರಪಂಚದ ಅತಿದೊಡ್ಡ ಜನರ ಅಭಿಯಾನವಾಗಿದೆ. 27 ರಾಷ್ಟ್ರಗಳಲ್ಲಿ ಸದ್ಗುರು ಒಂಟಿಯಾಗಿ ಮೋಟಾರ್ ಬೈಕ್ ಮೂಲಕ 100-ದಿನಗಳ ಪ್ರಯಾಸಕರ ಪ್ರಯಾಣವನ್ನು ಕೈಗೊಂಡಿದ್ದರು. ಜಾಗತಿಕ ದುರಂತದ ಬಗ್ಗೆ ಜಾಗೃತಿ ಮೂಡಿಸಲು 'ಮಣ್ಣು ಉಳಿಸಿ' ಎಂಬ ಬೃಹತ್ ಜನಾಂದೋಲನ ನಡೆಸಿಕೊಟ್ಟ ಇವರ ಅನುಭವಗಳ ಬಗ್ಗೆ ತಿಳಿದುಕೊಳ್ಳಲು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಉತ್ಸುಕರಾಗಿದ್ದರು.
ಈ ಕುರಿತು ಮಾತನಾಡಿದ ಮೋಮಿತಾ ಸೇನ್ ಶರ್ಮಾ, ಸದ್ಗುರು ಅವರ ಈ ಕಾರ್ಯ ಅನೇಕರಿಗೆ ನಂಬಲಸಾಧ್ಯವಿರಬಹುದು, ಆದರೆ ಲಂಡನ್‌ನಿಂದ ಭಾರತದವರೆಗೆ 30 ಸಾವಿರ ಕಿ.ಮೀ ಆಯೋಜಿಸಲಾದ ಮಣ್ಣು ಉಳಿಸಿ ಬೈಕ್ ಪ್ರಯಾಣದ ಕ್ರಿಯಾ ಯೋಜನೆಯನ್ನು, ಸದ್ಗುರುಗಳು ಸ್ವಯಂಸೇವಕರ ಪ್ರಮುಖ ತಂಡಕ್ಕೆ ಕೇವಲ ಮೂರು ತಿಂಗಳ ಮೊದಲು ಅನಾವರಣಗೊಳಿಸಿದ್ದು ನಿಜಕ್ಕೂ ಅಚ್ಚರಿ ತರುವಂಥದ್ದು ಎಂದು ನುಡಿದರು. ದನ್ನು ನಾನು ಕೇಳಿದಾಗ, ಇದು ಸಾಧ್ಯವೆ ಎಂದು ಎನಿಸಿತ್ತು. ಆದರೆ ಸದ್ಗುರುಗಳು ನೀಡಿದ ಸ್ಪಷ್ಟ ನಿರ್ದೇಶನದ ಕಡೆಗೆ ತಂಡಗಳು ಒಗ್ಗೂಡುತ್ತಿದ್ದಂತೆ, ತೋರಿಕೆಯಲ್ಲಿ ಅಸಾಧ್ಯವಾದ ಇದನ್ನು ಸಾಧ್ಯವಾಗಿಸಲಾಯಿತು ಎಂದು ಅವರು ಹೇಳಿದರು.
ಅಭಿಯಾನದ ತಂಡದ ಮತ್ತೊಬ್ಬ ಪ್ರಮುಖ ಸದಸ್ಯರಾದ ಲೋಕನೇತ್ರ ಮಾತನಾಡಿ, 'ನಮ್ಮ ದೃಷ್ಟಿಕೋನವು ಸ್ಪಷ್ಟವಾಗಿದ್ದರೆ, ದಿಕ್ಕನ್ನು ಸದ್ಗುರುಗಳು ತೋರಿಸುತ್ತಾರೆ ಎಂದರು. ಸದ್ಗುರುಗಳ ಗುರಿಯನ್ನು ತಮ್ಮದಾಗಿಸಿಕೊ೦ಡು, ಹಗಲು ರಾತ್ರಿ ಎನ್ನದೇ ಕಾರ್ಯ ನೆರವೇರಿಸಿದ್ದಕ್ಕೆ ಸ್ವಯಂಸೇವಕರನ್ನು ಅವರು ಅಭಿನಂದಿಸಿದರು. 'ಈ ಘರ್ಷಣೆಗಳು ಮತ್ತು ಗೊಂದಲಗಳು ಯಾವಾಗಲೂ ಇರುತ್ತವೆ, ಆದರೆ ಹೊಂದಾಣಿಕೆ ಯಾವಾಗಲೂ ಸಂಪೂರ್ಣವಾಗಿರುತ್ತದೆ' ಎಂದು ಹೇಳಿದರು.
'ಸ್ವಯಂಸೇವಕತ್ವವು ಒಂದು ಆಯ್ಕೆಯಾಗಿದೆ ಮತ್ತು ನಿಸ್ವಾರ್ಥವಾಗಿ ತನ್ನನ್ನು ತಾನೇ ಅರ್ಪಿಸಿಕೊಳ್ಳುವುದು ಸ್ವಯಂ-ಬೆಳವಣಿಗೆಗೆ ಒಂದು ದೊಡ್ಡ ಸಾಧನವಾಗಿದೆ ಎಂದು ಜೆ.ಬಿ ಚೆರಿಯನ್ ಹೇಳಿದರು. ಸ್ವಯಂಸೇವಕರ ಅನ್ವೇಷಣೆಯು ತಮ್ಮ ಸುಧಾರಣೆಗಾಗಿಯೇ ಇರುವುದರಿಂದ, ಅವರು ಸಕ್ರಿಯವಾಗಿ ತಮಗೆ ದೊರೆತ ಪ್ರತಿಕ್ರಿಯೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ ಮತ್ತು ಅದಕ್ಕೆ ಅವರು ಕೃತಜ್ಞರಾಗಿರುತ್ತಾರೆ ಎಂದರು.
ಮಣ್ಣು ಉಳಿಸಿ ಅಭಿಯಾನದವನ್ನು ಕಾರ್ಯಗತಗೊಳಿಸುವಲ್ಲಿ ಒಳಗೊಂಡ ಅಸಂಖ್ಯಾತ ಸಂಕೀರ್ಣತೆಗಳನ್ನು ತಂಡದ ಸದಸ್ಯರು ವಿವರಿಸುತ್ತಿದ್ದಂತೆಯೇ, ಕಾರ್ಯಕ್ರಮದಲ್ಲಿ ಭಾಗವಹಿಸುವವರು ತೆರೆಮರೆಯ ಎಲ್ಲಾ ಕ್ರಿಯೆಗಳನ್ನು ಕೇಳಿ ಆಶ್ಚರ್ಯಚಕಿತರಾಗಿ ಪ್ರಶ್ನೆಗಳ ಮಳೆಯನ್ನು ಸುರಿಸಿದರು.
ತಮ್ಮ ಕಂಪನಿಯ ಪರಿವರ್ತನೆಯ ಕಥೆಯನ್ನು ವಿವರಿಸುತ್ತಾ, ಪಾರ್ಥಸಾರಥಿಯವರು ಕಂಪನಿಯು ಉತ್ಕೃಷ್ಟತೆಯನ್ನು ಸಾಧಿಸಲು ಬೇಕಾದ ಐದು ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸಿದರು. 'YIELD - ಲಾಭದ ಮೇಲೆ ಸಂಪೂರ್ಣ ಗಮನ, CLIMB - ಅಭಿವೃದ್ದಿ(scaling)ಯ ಮೇಲೆ ಪಟ್ಟು ಬಿಡದ ಗಮನ, UNMIX - ಸಂಕೀರ್ಣತೆಗಳನ್ನು ಕಡಿಮೆ ಮಾಡುವುದು, FABLE - ಉತ್ತಮ ವಿಚಾರಗಳನ್ನು ನಿರ್ಮಿಸುವುದು ಮತ್ತು ಕೊನಯದಾಗಿ - ವಿಶ್ವಾಸಾರ್ಹತೆ' ಎಂದರು.
'ಹ್ಯೂಮನ್ ಈಸ್ ನಾಟ್ ಎ ರಿಸೋರ್ಸ್' ಕಾರ್ಯಕ್ರಮದ ಆರನೇ ಆವೃತ್ತಿಯು - ಕಲಿಕೆ, ಸಾಮರ್ಥ್ಯ ಮತ್ತು ಕಾರ್ಯಗತಗೊಳಿಸುವಿಕೆಯ ಮೂರು ಅಂಶಗಳನ್ನು ಬಳಸಿಕೊಂಡು ಸಕ್ರಿಯ ಪರಿವರ್ತನೆಯ ಸಾಧ್ಯತೆಯನ್ನು ತೆರೆದಿದೆ. ಕಾರ್ಯಕ್ರಮದ ತಮ್ಮ ಪರಿಚಯಾತ್ಮಕ ವಿಡಿಯೋದಲ್ಲಿ ಮೊದಲ ದಿನದಂದು ಸದ್ಗುರುಗಳು, 'ಮನುಷ್ಯರು ಸಂಪನ್ಮೂಲವಲ್ಲ, ಅವರು ಒಂದು ಸಾಧ್ಯತೆ. ಒಂದು ಸಾಧ್ಯತೆ ಮತ್ತು ವಾಸ್ತವದ ನಡುವೆ ಯಾವಾಗಲೂ ಅಂತರವಿರುತ್ತದೆ ಅಷ್ಟೇ. ವ್ಯಕ್ತಿಗಳು ಏನಾಗುತ್ತಾರೆ ಎಂಬುದು ಮೂಲಭೂತವಾಗಿ ನಾವು ಈ ಸಾಧ್ಯತೆಯನ್ನು ಬಹಿರಂಗಪಡಿಸಬಹುದೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.' ಎಂದು ವಿವರಿಸಿದರು.
ಓರಿಯೆಂಟಲ್ ಹೋಟೆಲ್‌ಗಳ ನಾಯಕತ್ವ ಮತ್ತು ವ್ಯವಹಾರ ಸಲಹೆಗಾರ್ತಿ ಮತ್ತು ಸ್ವತಂತ್ರ ಮಂಡಳಿಯ ನಿರ್ದೇಶಕಿಯಾದ ನೀನಾ ಚತ್ರಾತ್ ಅವರು ಭಾಗವಹಿಸುವವರ ಕಲಿಕೆಯ ಆದ್ಯತೆಗಳನ್ನು ವಿವರಿಸಿದರು, ಜನರೊಂದಿಗೆ ಸಂಪರ್ಕ ಸಾಧಿಸುವಾಗ ಹೊಂದಾಣಿಕೆಯನ್ನು ಸಾಧಿಸಲು ವಿಭಿನ್ನ ಕಲಿಕೆಯ ಆದ್ಯತೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಿದರು. ರುಚಿರಾ ಚೌಧರಿ, ಕಾರ್ಯನಿರ್ವಾಹಕಿ ತರಬೇತಿದಾರ್ತಿ ಮತ್ತು ಸಂಸ್ಥಾಪಕಿ, ಟ್ರೂನಾರ್ತ್ ಕನ್ಸಲ್ಟಿಂಗ್, ಪರಿಣಾಮಕಾರಿ ನಾಯಕತ್ವದ ರೋಲ್ ಮಾಡೆಲಿಂಗ್ ಸಾಧನವನ್ನು, ತರಬೇತುಗೊಳಿಸುವ ಕಲ್ಪನೆಯನ್ನು ಬಿತ್ತರಿಸುವ ವಿವರವಾದ ಅವಧಿಗಳನ್ನು ನಡೆಸಿದರು. 'ಒಳ್ಳೆಯ ತರಬೇತುದಾರರಾಗದೆ ನೀವು ಉತ್ತಮ ನಾಯಕರಾಗಲು ಸಾಧ್ಯವಿಲ್ಲ' ಎಂಬ ಅವರ ಸಂದೇಶವು ಭಾಗವಹಿಸುವವರಲ್ಲಿ ನಿಸ್ಸಂದಿಗ್ಧವಾಗಿ ಪ್ರತಿಧ್ವನಿಸಿತು. ಮಾಜಿ ಭಾರತೀಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಕ್ರಿಕೆಟ್ ಮತ್ತು ವ್ಯಾಪಾರದ ನಡುವಿನ ಸಮಾನಾಂತರವನ್ನು ತರಬೇತುಗೊಳಿಸುವ ಮತ್ತು ವಿಭಿನ್ನ ಆಟಗಾರರ ವರ್ತನೆಗಳೊಂದಿಗೆ ವ್ಯವಹರಿಸುವ ಸವಾಲುಗಳನ್ನು ಎತ್ತಿ ತೋರಿಸಿದರು.
ಹ್ಯೂಮನ್ ಈಸ್ ನಾಟ್ ಎ ರಿಸೋರ್ಸ್ (ಹಿನಾರ್) ಎಂಬುದು ಈಶಾ ಲೀಡರ್‌ಶಿಪ್ ಅಕಾಡೆಮಿ ಆಯೋಜಿಸುವ ವಾರ್ಷಿಕ ನಾಯಕತ್ವ ಕಾರ್ಯಕ್ರಮವಾಗಿದೆ. 3 ದಿನಗಳ ಕಾರ್ಯಕ್ರಮವು ವಿವಿಧ ಕ್ಷೇತ್ರಗಳ ಚಿಂತನಶೀಲ ನಾಯಕರು, ವ್ಯಾಪಾರ ಮತ್ತು ಮಾನವ ಸಂಪನ್ಮೂಲ ಅಭ್ಯಾಸಕಾರರನ್ನು ಒಟ್ಟುಗೂಡಿಸುತ್ತದೆ ಮತ್ತು ಪ್ರಾಯೋಗಿಕ ಹಂತಗಳನ್ನು ಚರ್ಚಿಸಲು ಮಾನವರನ್ನು ಸಂಪನ್ಮೂಲಗಳಿ೦ದ ಸಾಧ್ಯತೆಗಳಾಗುವ ಬದಲಾವಣೆಯನ್ನು ಸಕ್ರಿಯಗೊಳಿಸುತ್ತದೆ.
10 ವರ್ಷಗಳ ಹಿಂದೆ, ಸದ್ಗುರುಗಳು ಯೋಗಕ್ಷೇಮಕ್ಕಾಗಿ ಸಾಧನಗಳೊಂದಿಗೆ ಬಾಹ್ಯ ಕೌಶಲ್ಯ ಸಾಧನಗಳನ್ನು ಸಂಯೋಜಿಸುವ ಮೂಲಕ ಉನ್ನತ ಗುಣಮಟ್ಟದ ನಾಯಕತ್ವದ ಶಿಕ್ಷಣವನ್ನು ಒದಗಿಸಲು ಈಶಾ ಲೀಡರ್‌ಶಿಪ್ ಅಕಾಡೆಮಿಯನ್ನು ಸ್ಥಾಪಿಸಿದರು. ಈಶಾ ಲೀಡರ್‌ಶಿಪ್ ಅಕಾಡೆಮಿಯು ತಂತ್ರಗಳನ್ನು ಮೀರಿದ ನಾಯಕತ್ವವನ್ನು ಸಹಜ ಮತ್ತು ಅರ್ಥಗರ್ಭಿತ ಪ್ರಕ್ರಿಯೆಯಾಗಿ ಬೆಳೆಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಬಾಹ್ಯ ಸನ್ನಿವೇಶಗಳು ಮತ್ತು ಜನರನ್ನು ನಿರ್ವಹಿಸುವ ಮೊದಲು, ತಮ್ಮ ಸ್ವಂತ ಮನಸ್ಸು, ದೇಹ ಮತ್ತು ಶಕ್ತಿಗಳನ್ನು ನಿರ್ವಹಿಸುವ ಪ್ರಾಮುಖ್ಯತೆಯೇ ಇದರ ಮಾರ್ಗದರ್ಶಿ ತತ್ವವಾಗಿದೆ.
ಈವೆಂಟ್ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
HINAR 2022 ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಭೇಟಿ ನೀಡಿ.