ಕಣ್ಣೂರು: ಉತ್ತರ ಕೇರಳದಲ್ಲಿ ಇಂಗ್ಲಿಷ್ ಶಿಕ್ಷಣ ಪಡೆದ ಮೊದಲ ಮುಸ್ಲಿಂ ಮಹಿಳೆ ಎಂಬ ಖ್ಯಾತಿಯ ಮಾಳೀಕಲ್ ಮರಿಯಮ್ಮ (99) ನಿಧನರಾಗಿದ್ದಾರೆ.
ಮರಿಯಮ್ಮ ಮಹಿಳೆಯರಿಗೆ ಹೊಲಿಗೆ ತರಗತಿಗಳು, ಸಾಕ್ಷರತಾ ತರಗತಿಗಳಂತಹ ಅನೇಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಸರಕಾರದ ಮಟ್ಟದಲ್ಲಿ ಸಾಕ್ಷರತಾ ತರಗತಿಗಳನ್ನು ಪ್ರಾರಂಭಿಸಿ ಅನಕ್ಷರಸ್ಥ ಮಹಿಳೆಯರನ್ನು ಸಾಕ್ಷರರನ್ನಾಗಿ ಮಾಡಲು ಪ್ರಯತ್ನಿಸಿದ್ದರು.
ಇದೇ ವೇಳೆ ಮಾಳಿಕಲ್ ಮರಿಯಮ್ಮ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ. ತಲಶ್ಶೇರಿಯ ಇತಿಹಾಸದ ಜೊತೆಗೆ ಹೆಜ್ಜೆ ಗುರುತುಗಳನ್ನು ಮೂಡಿಸಿದ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಸಂಪ್ರದಾಯವಾದಿಗಳ ನಿμÉೀಧವನ್ನು ಕಡೆಗಣಿಸಿ ಇಂಗ್ಲಿμï ಶಿಕ್ಷಣ ಪಡೆದು ಇತರರಿಗೆ ಮಾರ್ಗದರ್ಶಕಿಯಾಗಿದ್ದರು. ಮಹಿಳೆಯರ ಉನ್ನತಿಗಾಗಿ ಮತ್ತು ಅವರ ಶೈಕ್ಷಣಿಕ ಹಕ್ಕುಗಳಿಗಾಗಿ ಶ್ರಮಿಸಿದರು. ಅವರ ಅಗಲಿಕೆಯು ರಾಜ್ಯಕ್ಕೆ ಮತ್ತು ಅನೇಕ ತಲೆಮಾರುಗಳಿಗೆ ದುಃಖವನ್ನು ತಂದಿದೆ. ಆ ದುಃಖವನ್ನು ಹಂಚಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿರುವರು.
ಉತ್ತರ ಕೇರಳದಲ್ಲಿ ಇಂಗ್ಲಿಷ್ ಶಿಕ್ಷಣ ಪಡೆದ ಮೊದಲ ಮುಸ್ಲಿಂ ಮಹಿಳೆ ಮಾಳಿಕಲ್ ಮರಿಯಮ್ಮ ನಿಧನ
0
ಆಗಸ್ಟ್ 06, 2022
Tags