ಮಲಪ್ಪುರಂ; ನನ್ನ ತಾಯಿಯ ಚಿಕ್ಕಪ್ಪ ಸೈನಿಕರಾಗಿದ್ದು, ಅಂತಹ ಕುಟುಂಬದ ಹಿನ್ನೆಲೆಯಿಂದ ಬಂದವನು ತಾನೆಂದು ಕೆ.ಟಿ.ಜಲೀಲ್ ವಿಶೇಷ ಹೇಳಿಕೆಯೊಂದನ್ನು ನೀಡಿದ್ದಾರೆ.
ನನ್ನ ತಾಯಿಯ ಚಿಕ್ಕಪ್ಪ ಬ್ರಿಟಿμï ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದರು. ಅದಕ್ಕಾಗಿ 12 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದನ್ನೂ ಜಲೀಲ್ ಸ್ಮರಿಸುತ್ತಾರೆ. ಇಂದಿನ ದಿನಗಳಲ್ಲಿ ಯಾರು ಏನು ಹೇಳುತ್ತಾರೆ ಎನ್ನುವುದನ್ನು ನೋಡುತ್ತಿಲ್ಲ ಎಂದು ಜಲೀಲ್ ಆರೋಪಿಸಿದ್ದಾರೆ.
ಜಲೀಲ್ ಅವರು ಆಜಾದಿ ಕಾಶ್ಮೀರ್ ಮತ್ತು ಭಾರತ ಆಕ್ರಮಿತ ಕಾಶ್ಮೀರವನ್ನು ತಪ್ಪಾಗಿ ನಿರೂಪಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಜಲೀಲ್ ಅವರು ಕಾಶ್ಮೀರಕ್ಕೆ ಭೇಟಿ ನೀಡಿದ ಅನುಭವವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳುವ ಮೂಲಕ ಈ ಕಾಮೆಂಟ್ ಮಾಡಿದ್ದಾರೆ. ಪತ್ತನಂತಿಟ್ಟ ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ಕೂಡ ಜಲೀಲ್ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸುವಂತೆ ಈಗಾಗಲೇ ಆದೇಶಿಸಿದೆ. ಫೇಸ್ ಬುಕ್ ಮೂಲಕ ಜಲೀಲ್ ಸೇನೆಯ ವಿರುದ್ಧ ಟೀಕೆ ಮಾಡಿದ್ದರು. ಕಾಶ್ಮೀರದಲ್ಲಿ ಎಲ್ಲೆಂದರಲ್ಲಿ ಸೈನಿಕರಿದ್ದು, ಇದರಿಂದ ಕಾಶ್ಮೀರದ ಜನತೆ ನಗುವುದನ್ನೇ ಮರೆತಿದ್ದಾರೆ ಎಂಬುದು ಜಲೀಲ್ ಅವರು ಬರೆದುಕೊಂಡಿದ್ದರು.
ಜಲೀಲ್ ವಿರುದ್ಧ ಸಮಾಜದ ನಾನಾ ಮೂಲೆಗಳಿಂದ ಟೀಕೆಗೆ ಗುರಿಯಾದ ಮತ್ತೊಂದು ಕುತೂಹಲಕಾರಿ ಘಟನೆ ವಿಧಾನಸಭೆಯಲ್ಲಿ ನಡೆದಿದೆ. ಮೈಕ್ ಆಫ್ ಮಾಡದೆ ಕೆ.ಕೆ.ಶೈಲಜಾ ಅವರು ಜಲೀಲ್ ವಿರುದ್ಧ ‘ನಮ್ಮನ್ನು ಇಕ್ಕಟ್ಟಿಗೆ ಇನ್ನೇನು ಸಿಲುಕಿಸುವನೋ’ ಎಂದು ಸ್ವಗತದಲ್ಲಿ ಹೇಳಿರುವುದು ಮೊನ್ನೆ ಚರ್ಚೆಗೊಳಗಾಗಿತ್ತು. ಕೆ.ಕೆ.ಶೈಲಜಾ ಅವರ ಈ ಮಾತುಗಳನ್ನು ಮಾಧ್ಯಮಗಳು ಚರ್ಚಿಸಿದಾಗ, ಜಲೀಲ್ ಬಗ್ಗೆ ಸಿಪಿಎಂ ಮತ್ತು ಎಡರಂಗದ ನಿಲುವು ಸ್ಪಷ್ಟವಾಯಿತು. ಈ ಎಲ್ಲಾ ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡು ಜಲೀಲ್ ತಮ್ಮ ಕೌಟುಂಬಿಕ ಹಿನ್ನೆಲೆಯನ್ನು ಸ್ಪಷ್ಟಪಡಿಸುವ ಮೂಲಕ ತಮ್ಮ ಅಭಿಪ್ರಾಯಕ್ಕೆ ಮುಲಾಮು ಬಳಿಯಲು ಯತ್ನಿಸಿದಂತೆ ಕಂಡುಬಂದರು.
ಗಾಯಕ್ಕೆ ಮುಲಾಮು: 'ನನ್ನ ಅಜ್ಜ ಸೈನಿಕರಾಗಿದ್ದರು, ಬ್ರಿಟಿμï ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದರು': ಅಂತಹ ಹಿನ್ನೆಲೆಯಿಂದ ಬಂದವನು ತಾನು ಎಂದ ಕೆ.ಟಿ.ಜಲೀಲ್
0
ಆಗಸ್ಟ್ 25, 2022
Tags