ಕಾಸರಗೋಡು: ವೆಳ್ಳರಿಕುಂಡ್ ತಾಲೂಕಿನಲ್ಲಿ ಪ್ರವಾಹದಿಂದ ಅಪಾರ ಹಾನಿ ಸಂಭವಿಸಿದ್ದು, ಭಾರಿ ಭೂಕುಸಿತಕ್ಕೆ ಕಾರಣವಾಗಿರುವ ಪ್ರದೇಶಗಳಿಗೆ ಅಪರ ಜಿಲ್ಲಾಧಿಕಾರಿ ಡಿ.ಎಸ್ ಮೇಘಶ್ರೀ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಅವಲೋಕನ ನಡೆಸಿತು. ಬಳಾಲ್ ಗ್ರಾಮದ ಚುಳ್ಳಿ ಪ್ರದೇಶದಲ್ಲಿ ಅರಣ್ಯದಲ್ಲಿ ಮತ್ತಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಪ್ರದೇಶದಿಂದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಭೀಮನಡಿ ಗ್ರಾಮದ ಕೂರನಗುಂದ ಎಂಬಲ್ಲಿ ಮಹಿಳೆಯೊಬ್ಬರು ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಕೂರನಗುಂದದ ರವೀಂದ್ರನ್ ಎಂಬವರ ಪತ್ನಿ ಲತಾ ನಾಪತ್ತೆಯಾದವರು. ಪೆರಿಂಗೊ ಅಗ್ನಿಶಾಮಕ ಮತ್ತು ಪೆÇಲೀಸರು ಸ್ಥಳಕ್ಕೆ ಧಾವಿಸಿದ್ದು, ಶೋಧ ಆರಂಭಿಸಿದ್ದಾರೆ. ಕುನ್ನುಂಗೈ ಮುಕ್ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ವೆಳ್ಳರಿಕುಂಡ್ ಪೆÇಲೀಸರು, ಪೆರಿಂಗೊಂ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.