HEALTH TIPS

100 ಬಿಲಿಯ ಡಾಲರ್ ಎಫ್‌ಡಿಐ ಆಕರ್ಷಿಸುವ ಹಾದಿಯಲ್ಲಿ ಭಾರತ: ಕೇಂದ್ರದ ಮಾಹಿತಿ

                ನವದೆಹಲಿ :ಆರ್ಥಿಕ ಸುಧಾರಣೆಗಳು ಹಾಗೂ ಉದ್ಯಮಕ್ಕೆ ಅನುಕೂಲಕರವಾದ ವಾತಾವರಣ ಕಲ್ಪಿಸಿರುವ ಪರಿಣಾಮವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತವು 100 ಶತಕೋಟಿ ಡಾಲರ್ ಮೌಲ್ಯದ ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯನ್ನು ಆಕರ್ಷಿಸುವ ಹಾದಿಯಲ್ಲಿದೆ ಎಂದು ಕೇಂದ್ರ ಸರಕಾರವು ಶನಿವಾರ ತಿಳಿಸಿದೆ.

                 2021-22ನೇ ಸಾಲಿನಲ್ಲಿ ಭಾರತಕ್ಕೆ 83.6 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ ಹರಿದುಬಂದಿದ್ದು, ಇದು ಈವರೆಗಿನ ಅತ್ಯಂತ ಗರಿಷ್ಠ ಎಫ್‌ಡಿಐ ಹೂಡಿಕೆಯಾಗಿದೆ. ''ಕಳೆದ ಹಣಕಾಸು ವರ್ಷದಲ್ಲಿ 101 ದೇಶಗಳಿಂದ ಎಫ್‌ಡಿಐ ಹರಿದುಬಂದಿದ್ದು, 31 ಕೇಂದ್ರಾಡಳಿತ ಹಾಗೂ ರಾಜ್ಯಗಳಲ್ಲಿ ಹೂಡಿಕೆ ಮಾಡಲಾಗಿದೆ. ಆರ್ಥಿಕ ಸುಧಾರಣಾಕ್ರಮಗಳು ಹಾಗೂ ಉದ್ಯಮಸ್ನೇಹಿ ವಾತಾವರಣದ ಹಿನ್ನೆಲೆಯಲ್ಲಿ ಭಾರತವು ಪ್ರಸಕ್ತ ಹಣಕಾಸು ವರ್ಷದಲ್ಲಿ 100 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಹೂಡಿಕೆಯನ್ನು ಆಕರ್ಷಿಸುವ ಹಾದಿಯಲ್ಲಿದೆ'' ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

                 ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಲು ಸರಕಾರವು ಉದಾರವಾದಿ ಹಾಗೂ ಪಾರದರ್ಶ ನೀತಿಯನ್ನು ಅಳವಡಿಸಿಕೊಂಡಿದ್ದು, ಬಹುತೇಕ ವಲಯಗಳನ್ನು ವಿದೇಶಿ ನೇರ ಹೂಡಿಕೆಗೆ ತೆರೆದಿಡಲಾಗಿದೆ ಎಂದು ಅದುಹೇಳಿದೆ. ಉದ್ಯಮ ಮಾರ್ಗದರ್ಶಿ ಸೂತ್ರಗಳು ಹಾಗೂ ನಿಯಮಾವಳಿಗಳ ಉದಾರೀಕರಣ, ಅನವಶ್ಯಕವಾದ ಅನುಸರಣಾ ಹೊರೆಯನ್ನು ಕಡಿಮೆಗೊಳಿಸುವುದು, ವೆಚ್ಚವನ್ನು ಕಡಿಮೆಗೊಳಿಸುವುದು ಹಾಗೂ ಭಾರತದಲ್ಲಿ ಉದ್ಯಮಕ್ಕೆ ಅನುಕೂಲಕರವಾದ ವಾತಾವರಣವನ್ನು ವೃದ್ಧಿಸುವುದು ಈ ಸುಧಾರಣಾ ಕ್ರಮಗಳನ್ನು ಒಳಗೊಂಡಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

                ಹಾಲಿ ಹಣಕಾಸು ವರ್ಷದ ಎಪ್ರಿಲ್-ಜೂನ್ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆಯು ಶೇ.16.6 ಶತಕೋಟಿ ಡಾಲರ್ ಆಗಿದ್ದು, ಹಿಂದಿನ ಸಾಲಿಗಿಂತ ಶೇ.6ರಷ್ಟು ಕುಸಿತವನ್ನು ಕಂಡಿದೆ ಎಂದು ಅದು ಹೇಳಿದೆ. ಕಡಿಮೆಗುಣಮಟ್ಟದ ಹಾಗೂ ಅಪಾಯಕಾರಿಯಾದ ಆಟಿಕೆಗಳ ಆಮದನ್ನು ನಿರ್ಬಂಧಿಸಲು ಹಾಗೂ ಆಟಿಕೆಗಳ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಹಲವಾರು ಆಯಕಟ್ಟಿನ ಕ್ರಮಗಳನ್ನು ಕೇಂದ್ರ ಸರಕಾರವು ಕೈಗೊಂಡಿದೆ.

               2021-22ರ ಅವಧಿಯಲ್ಲಿ 877.8 ಕೋಟಿ ರೂ. ಮೌಲ್ಯದ ಆಟಿಕೆಗಳನ್ನು ಆಮದು ಮಾಡಿಕೊಂಡಿದ್ದು, ಹಿಂದಿನ ಸಾಲಿಗಿಂತ ಶೇ.70ರಷ್ಟು ಇಳಿಕೆಯಾಗಿದೆ. ಇನ್ನೊಂದೆಡೆ,ದೇಶೀಯ ಆಟಿಕೆಗಳು ಶೇ.61 ಏರಿಕೆಯಾಗಿದ್ದು, 326 ಮಿಲಿಯ ಅಮೆರಿಕನ್ ಡಾಲರ್‌ಗಳಾಗಿವೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries