ಕುಂಬಳೆ: ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷ, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಜಯಂತಿ ಪ್ರಯುಕ್ತ ಪುವೆಂಪು ನೆಂಪು 2022 ಹಾಗೂ ತುಳು ಲಿಪಿ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಅ.10ಕ್ಕೆ ಆನಂತಪುರದಲ್ಲಿ ನಡೆಸಲು ನಿರ್ಧರಿಸಲಾಗಿದೆ. ತುಳುವಲ್ರ್ಡ್ ಮಂಗಳೂರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪುವೆಂಪು ಅಭಿಮಾನಿಗಳು ಆಯೋಜಿಸುವ ಕಾರ್ಯಕಮದ ಯಶಸ್ವಿಗಾಗಿ ಈಗಾಗಲೇ ಸ್ವಾಗತ ಸಮಿತಿ ರಚಿಸಲಾಗಿದ್ದು ಪುಣಿಂಚಿತ್ತಾಯರ ಸಾಹಿತ್ಯ,ಸಾಂಸ್ಕøತಿಕ ಹಾಗೂ ಸಂಶೋಧಾನತ್ಮಕ ವಿಷಯಗಳನ್ನು ಪ್ರಸ್ತುತ ಪಡಿಸುವುದು ಕಾರ್ಯಕ್ರಮದ ಧ್ಯೆಯವಾಗಿದೆ. ಈ ಬಗ್ಗೆ ವಿಚಾರ ಗೋಷ್ಠಿ, ಸಾಹಿತ್ಯ ಗೋಷ್ಠಿ, ಪುವೆಂಪು ಸಮಕಾಲೀನ ಸಾಹಿತಿಗಳ ಸಮ್ಮಿಲನ, ಪುವೆಂಪು ರಚಿತ ನಾಟಕಗಳ ಪ್ರದರ್ಶನ ಹಾಗೂ ಅಭಿಮಾನಿಗಳ ವಿಚಾರ ಮಂಡನೆ, ಪುವೆಂಪು ಸಮ್ಮಾನ್ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಏಕ ದಿನ ಸಮ್ಮೇಳನ ಸರ್ವಾಧ್ಯಕ್ಷರಾಗಿ ಗಲ್ಫ್ ರಾಷ್ಟ್ರದ ತುಳು ಸಂಘಟಕ,ಸಾಹಿತ್ಯ,ಸಾಂಸ್ಕೃತಿಕ ಪೆÇ್ರೀತ್ಸಾಹಕ,ಮಾರ್ಗದರ್ಶಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಆವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನಾ ಸಮಿತಿ ತಿಳಿಸಿದೆ. ಈ ಹಿಂದೆ ಬದಿಯಡ್ಕದಲ್ಲಿ ನಡೆದ ವಿಶ್ವ ತುಳುವೆರೆ ಆಯನೋದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಸರ್ವೋತ್ತಮ ಶೆಟ್ಟಿ ಅವರು ಬಳಿಕ ಯುಎಇಯಲ್ಲೂ ತುಳುವೆರೆ ಆಯನೋ ನಡೆಸುವ ಮೂಲಕ ತುಳು ನಾಡು ನುಡಿ ಸಂಸ್ಕೃತಿಯ ಪೆÇ್ರೀತ್ಸಾಹಕ್ಕೆ ಕೊಡುಗೆ ನೀಡಿದ್ದಾರೆ.
ಅನಂತಪುರದಲ್ಲಿ ಅ.10ಕ್ಕೆ ಪುವೆಂಪು ನೆಂಪು: ತುಳು ಲಿಪಿ ದಿನಾಚರಣೆ ಕಾರ್ಯಕ್ರಮಕ್ಕೆ ಸಿದ್ಧತೆ: ಸರ್ವಾಧ್ಯಕ್ಷರಾಗಿ ಸರ್ವತ್ತೋಮ ಶೆಟ್ಟಿ ಅಬುಧಾಬಿ ಆಯ್ಕೆ
0
ಸೆಪ್ಟೆಂಬರ್ 20, 2022
Tags