ನವದೆಹಲಿ: 1893ರಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋದಲ್ಲಿ ಮಾಡಿದ್ದ ಭಾಷಣ ಅತ್ಯಂತ ಜನಪ್ರಿಯ. ಇಂದು ಪ್ರಧಾನಿ ನರೇಂದ್ರ ಮೋದಿ ಅದನ್ನು ನೆನಪು ಮಾಡಿಕೊಂಡಿದ್ದಾರೆ.
ಸೆಪ್ಟೆಂಬರ್ 11, 1893ರಂದು ಶತಮಾನದ ಹಿಂದೆ ಸ್ವಾಮಿ ವಿವೇಕಾನಂದರು ಚಿಕಾಗೋದ ಧಾರ್ಮಿಕ ವಿಶ್ವ ಸಂಸತ್ತಿನಲ್ಲಿ ಭಾಷಣ ಮಾಡಿದರು, ಬರೀ ಭಾಷಣ ಮಾಡಿದ್ದು ಮಾತ್ರವಲ್ಲ ಭಾರತದ ಸಂಸ್ಕೃತಿ, ಭಾರತೀಯ ಮಾನವ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದರು.
ಸೆಪ್ಟೆಂಬರ್ 11 ಸ್ವಾಮಿ ವಿವೇಕಾನಂದರಿಗೆ ವಿಶೇಷವಾಗಿದೆ. ಭಾರತದ ಸಂಸ್ಕೃತಿ, ತತ್ವ, ನಂಬಿಕೆಗಳನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟರು ಎಂದು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
ವೇದಾಂತದ ತತ್ವಗಳನ್ನು ಜಗತ್ತಿಗೆ, ಪಾಶ್ಚಾತ್ಯ ರಾಷ್ಟ್ರಗಳಿಗೆ ಪರಿಚಯಿಸುವುದರಲ್ಲಿ ಸ್ವಾಮಿ ವಿವೇಕಾನಂದರಿಗೆ ನಂಬಿಕೆಯಿತ್ತು. ಅಂದು ಚಿಕಾಗೋದಲ್ಲಿ ಮಾಡಿದ ಭಾಷಣ ನಂತರ ಪಾಶ್ಚಾತ್ಯ ದೇಶಗಳಲ್ಲಿ ಸ್ವಾಮಿ ವಿವೇಕಾನಂದರು ಜನಪ್ರಿಯರಾದರು.19ನೇ ಶತಮಾನದ ಭಾರತೀಯ ಧಾರ್ಮಿಕ ಗುರು ರಾಮಕೃಷ್ಣರ ಮುಖ್ಯ ಶಿಷ್ಯರಾಗಿದ್ದ ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ನ ಸಂಸ್ಥಾಪಕರು ಕೂಡ ಹೌದು.
Tweet
Conversation