ಎರ್ನಾಕುಳಂ: ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ನ್ಯಾಯಾಲಯ ರಿಮಾಂಡ್ ಮಾಡಿದೆ.
ಅವರನ್ನು ಕೊಚ್ಚಿಯ ಎನ್‍ಐಎ ವಿಶೇಷ ನ್ಯಾಯಾಲಯ ರಿಮಾಂಡ್‍ಗೆ ಒಪ್ಪಿಸಿದೆ. ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳ ರಿಮಾಂಡ್ ಅವಧಿ ಇಂದಿಗೆ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ ನ್ಯಾಯಾಲಯ ಮತ್ತೆ ರಿಮಾಂಡ್ ಆದೇಶ ನೀಡಿದೆ. ಅವರು ಮುಂದಿನ ತಿಂಗಳ 20ರವರೆಗೆ ರಿಮಾಂಡ್‍ನಲ್ಲಿ ಇರಲಿದ್ದಾರೆ. 20ರಂದು ಆರೋಪಿಗಳನ್ನು ನೇರವಾಗಿ ಕರೆತರದೆ ಆನ್‍ಲೈನ್‍ನಲ್ಲಿ ಹಾಜರುಪಡಿಸಿದರೆ ಸಾಕು ಎಂದು ಎನ್‍ಐಎ ನ್ಯಾಯಾಲಯವೂ ಸೂಚಿಸಿದೆ.
ಬಂಧಿತರಾಗಿರುವ ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಅವರ ರಿಮಾಂಡ್ ಅವಧಿಯೂ ಇದೇ 20ಕ್ಕೆ ಕೊನೆಗೊಳ್ಳಲಿದೆ. ಇದೇ ವೇಳೆ ಅಬ್ದುಲ್ ಸತ್ತಾರ್ ನನ್ನು ಕಸ್ಟಡಿಗೆ ನೀಡುವಂತೆ ಕೋರಿ ಎನ್ ಐಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಏಳು ದಿನಗಳ ಕಾಲ ಕಸ್ಟಡಿಗೆ ನೀಡಬೇಕೆಂದು ಎಂದು ಆಗ್ರಹಿಸಲಾಗಿತ್ತು. ಈ ಅರ್ಜಿಯನ್ನು ನ್ಯಾಯಾಲಯ ಸೋಮವಾರ ಪರಿಗಣಿಸಲಿದೆ.
ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣ; 11 ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ರಿಮಾಂಡ್ ಮಾಡಿದ ಎನ್.ಐ.ಎ.ಕೋರ್ಟ್
0
ಸೆಪ್ಟೆಂಬರ್ 30, 2022