ನವದೆಹಲಿ: ಸತತ ಮೂರನೇ ತಿಂಗಳು ಆಗಸ್ಟ್ ನಲ್ಲಿ ಸಗಟು ಹಣದುಬ್ಬರ
ಶೇ.12.41 ಕ್ಕೆ ಇಳಿಕೆಯಾಗಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ಕಂಡು, ಉತ್ಪಾದಿತ
ಉತ್ಪನ್ನಗಳ ಬೆಲೆಯಲ್ಲಿ ಕಡಿಮೆಯಾಗಿದ್ದರ ನಡುವೆ ಸಗಟು ಹಣದುಬ್ಬರ ಕಡಿಮೆಯಾಗಿದೆ.
ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಕಳೆದ ವರ್ಷ ಜುಲೈ ತಿಂಗಳಲ್ಲಿ ಶೇ.13.93 ಹಾಗೂ ಆಗಸ್ಟ್ ನಲ್ಲಿ ಶೇ.11.64 ರಷ್ಟಿತ್ತು.
ಈ ಆಗಸ್ಟ್ ತಿಂಗಳದ್ದೂ ಸೇರಿ ಸತತ 17 ನೇ ತಿಂಗಳು ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ 2 ಅಂಕಿಗಳಷ್ಟಿದೆ. ಈ ವರ್ಷ ಮೇ ತಿಂಗಳಲ್ಲಿ ಡಬ್ಲ್ಯುಪಿಐ ಹಣದುಬ್ಬರ ಶೇ.15.88 ರಷ್ಟಿತ್ತು.
ಜುಲೈ ನಲ್ಲಿ ಶೇ.10.77 ರಷ್ಟಿದ್ದ ಆಹಾರ ಪದಾರ್ಥಗಳ ಹಣದುಬ್ಬರ ಆಗಸ್ಟ್ ನಲ್ಲಿ ಶೇ.12.37 ರಷ್ಟಿತ್ತು. ಪ್ರಸಕ್ತ ತಿಂಗಳಲ್ಲಿ ತರಕಾರಿಯ ಬೆಲೆ ಶೇ.22.29 ರಷ್ಟು ಏರಿಕೆಯಾಗಿದ್ದು, ಜುಲೈ ನಲ್ಲಿ ಶೇ.18.25 ರಷ್ಟಿತ್ತು.
ಕೇಂದ್ರ ಬ್ಯಾಂಕ್ ನ ಪ್ರಕ್ಷೇಪಗಳ ಪ್ರಕಾರ 2022-23 ರಲ್ಲಿ ಹಣದುಬ್ಬರ ಸರಾಸರಿ ಶೇ.6.7 ರಷ್ಟಿರಲಿದೆ.