ನವದೆಹಲಿ: ಕೋಲ್ಕತ್ತ ಮೂಲದ ಮೊಬೈಲ್ ಗೇಮಿಂಗ್ ಆಯಪ್ ಸಂಸ್ಥೆ ಪ್ರವರ್ತಕರ ವಿರುದ್ಧ ನಡೆಯುತ್ತಿರುವ ಹಣ ಅಕ್ರಮ ವರ್ಗಾವಣೆ ತನಿಖೆ ಭಾಗವಾಗಿ ₹ 12.83 ಕೋಟಿ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ತಡೆ ಹಿಡಿದಿರುವುದಾಗಿ ಜಾರಿ ನಿರ್ದೇಶನಾಲಯ ಬುಧವಾರ ತಿಳಿಸಿದೆ.
77.62710139 ಬಿಟ್ ಕಾಯಿನ್ (₹12.83 ಕೋಟಿ) ಮೌಲ್ಯದ ಕ್ರಿಪ್ಟೋ ಕರೆನ್ಸಿಯನ್ನು ಬಿನಾನ್ಸ್ ಕ್ರಿಪ್ಟೋ ಎಕ್ಸ್‌ಚೇಂಜ್‌ನಲ್ಲಿ ಇಡಲಾಗಿದೆ. ಇದು ಇ-ನಗ್ಗಟ್ಸ್ ಎಂಬ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ಹೊಂದಿರುವ ಅಮೀರ್ ಖಾನ್ ಎಂಬ ವ್ಯಕ್ತಿಗೆ ಸೇರಿದೆ ಎಂದು ಫೆಡರಲ್ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ಕೋಲ್ಕತ್ತಾದಲ್ಲಿರುವ ಖಾನ್ ಮತ್ತು ಅವರ ತಂದೆ ನೇಸರ್ ಅಹ್ಮದ್ ಖಾನ್ ಅವರ ಕಂಪನಿ ಮೇಲೆ ದಾಳಿ ನಡೆಸಿ, ₹17.32 ಕೋಟಿ ನಗದು ವಶಪಡಿಸಿಕೊಂಡಿತ್ತು. ಕಳೆದ ವಾರ ಉತ್ತರ ಪ್ರದೇಶದಲ್ಲಿ ಅಮಿರ್ ಖಾನ್‌ನನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದರು.