ಬೆಂಗಳೂರು: ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಎರಡು ದಶಕಗಳ ಅವಧಿಯಲ್ಲಿ ಕೈಗೊಂಡ ಕ್ರಮಗಳಿಂದ ಶೇ 40ರಷ್ಟು ಜನರ ಸುಗಮ ಜೀವನಕ್ಕೆ ಸಹಕಾರಿಯಾಗಿದೆ. 12 ಕೋಟಿ ಜನರು ಡಿಜಿಟಲ್ ಲಾಕರ್‌ಗಳನ್ನು ಬಳಸತ್ತಿದ್ದಾರೆ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಹೇಳಿದರು.
ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ 6ನೇ ಟಿಐಎ ಶೃಂಗಸಭೆಯಲ್ಲಿ 'ಸುಸ್ಥಿರ ಅಭಿವೃದ್ಧಿ, ಸ್ಮಾರ್ಟ್‌ಸಿಟಿ, ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ನಗರ ತಂತ್ರಜ್ಞಾನ, ನವೋದ್ಯಮ ಬೆಳವಣಿಗೆ' ಕುರಿತು ಅವರು ಮಾತನಾಡಿದರು.
ತಂತ್ರಜ್ಞಾನದ ಫಲವಾಗಿ ಇಂದು 50 ಲಕ್ಷ ದಾಖಲೆಗಳು ಡಿಜಿಟಲ್ ಲಾಕರ್‌ಗಳಲ್ಲಿ ಲಭ್ಯವಿವೆ. ಯುಪಿಐ ಜತೆ ಹಣ ವರ್ಗಾವಣೆ ತಂತ್ರಜ್ಞಾನ, ದತ್ತಾಂಶ ಸಬಲೀಕರಣದಲ್ಲಿ ದತ್ತಾಂಶ ವಲಯ ಪ್ರಬಲವಾಗಿದೆ. ಉತ್ಪಾದನೆ, ಶಿಕ್ಷಣ ಮತ್ತಿತರ ವಲಯದ ಬೆಳವಣಿಗೆಗೂ ಪೂರಕವಾಗಿದೆ ಎಂದರು.
'ಜಿಪಿಎಸ್
ತಂತ್ರಜ್ಞಾನ ಮೊದಲು ಅಭಿವೃದ್ಧಿಪಡಿಸಿದ್ದು ಅಮೆರಿಕ ರಕ್ಷಣಾ ಸಚಿವಾಲಯ. ಜಿಪಿಎಸ್ ಈಗ
ಎಪಿಐ ಜತೆ ಸಹಭಾಗಿತ್ವ ಹೊಂದಿದೆ. ಓಲಾ, ಉಬರ್ ಕ್ಯಾಬ್‌ಗಳ ಚಾಲಕರು ಒಳಗೊಂಡಂತೆ ಬಹುತೇಕ
ಜನರ ಬದುಕಿಗೆ ಸಹಕಾರಿಯಾಗಿದೆ. ಪ್ರಸ್ತುತ 50 ಲಕ್ಷ ದಾಖಲೆಗಳು ಡಿಜಿಟಲ್ ಲಾಕರ್‌ಗಳಲ್ಲಿ
ಭದ್ರವಾ
ಗಿವೆ. ಆಸ್ತಿ ಅಡವಿಟ್ಟು ಸಾಲ ಪಡೆಯುವ ವ್ಯವಸ್ಥೆಯಿಂದ ಮಾಹಿತಿ ದಾಖಲೆ ನೀಡಿ ಸಾಲ ಪಡೆಯುವ ವ್ಯವಸ್ಥೆಗೆ ಬದಲಾಗಿದ್ದೇವೆ' ಎಂದು ವಿಶ್ಲೇಷಿಸಿದರು.
ಕರ್ನಾಟಕ ಡಿಜಿಟಲ್ ಆರ್ಥಿಕ ಅಭಿಯಾನದ ಅಧ್ಯಕ್ಷ ಬಿ.ವಿ.ನಾಯ್ಡು, ಬೆಂಗಳೂರು ಹೊರತುಪಡಿಸಿ ಇತರೆ ನಗರಗಳ ಆರ್ಥಿಕ ಬೆಳವಣಿಗೆಗೆ ಕ್ರಮ ಕೈಗೊಳ್ಳಬೇಕು ಎಂದರು.
ದಕ್ಷಿಣ ಭಾರತದ ಇಸ್ರೇಲ್ ರಾಯಭಾರಿ ಟಮ್ಮಿ ಬೆನ್-ಹೈಮ್, ಜರ್ಮನ್ ರಾಯಭಾರಿ ಅಚಿಮ್ ಬುರ್ಕಾರ್ಟ್, ಟಿಐಎ ಶೃಂಗಸಭೆಯ ಕ್ಯುರೇಟರ್ ಜೋಸ್ ಜಾಕೋಬ್, ಯುಎಸ್‌ಎ-ಭಾರತೀಯ ಆರ್ಥಿಕ ಅಭಿವೃದ್ಧಿ ನಿಗಮದ ಮುಖ್ಯಸ್ಥ ರಾಜು ಚಿಂತಲಾ ಉಪಸ್ಥಿತರಿದ್ದರು.