ಆಲಪ್ಪುಳ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಭಾರತ್ ಜೋಡೊ' 13ನೇ ದಿನದ ಯಾತ್ರೆಯನ್ನು ಮಂಗಳವಾರ ಪಕ್ಷದ ಸಾವಿರಾರು ಕಾರ್ಯಕರ್ತರೊಂದಿಗೆ ಚೇರ್ತಲದಿಂದ ಪ್ರಾರಂಭಿಸಿದರು.
ಸೇಂಟ್ ಮೈಕೆಲ್ ಕಾಲೇಜಿನ ಆವರಣದಲ್ಲಿ ರಂಬೂಟನ್ ಸಸಿಗಳನ್ನು ನೆಡುವ ಮೂಲಕ ಯಾತ್ರೆ ಆರಂಭಿಸಲಾಯಿತು.
ಸಸಿ ನೆಡುವ ಕಾರ್ಯಕ್ರಮವನ್ನು ಪಕ್ಷದ ಕೇರಳ ಘಟಕದ ಪರಿಸರ ವಿಭಾಗ ಶಸ್ತ್ರವೇದಿ ಆಯೋಜಿಸಿತ್ತು. ಬೆಳಿಗ್ಗೆ ಅವಧಿಯ 15 ಕಿ.ಮೀ. ಪಾದಯಾತ್ರೆ ಕುಥಿಯಾಥೋಡುನಲ್ಲಿ ಕೊನೆಯಾಯಿತು. ಕೇರಳದಲ್ಲಿ ಇನ್ನು 12 ದಿನಗಳಲ್ಲಿ 255 ಕಿ.ಮೀ. ಯಾತ್ರೆ ನಡೆಯಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದರು.
ಯಾತ್ರೆಯಲ್ಲಿ ರಾಹುಲ್ ಅವರಿಗೆ ಕೇರಳ ಕಾಂಗ್ರೆಸ್ ನಾಯಕರಾದ ಕೆ. ಮುರಳೀಧರನ್, ಪವನ್ ಖೇರಾ, ವಿ.ಡಿ. ಸತೀಶನ್, ಶನಿಮೋಲ್ ಉಸ್ಮಾನ್ ಸಾಥ್ ನೀಡಿದರು.