ಕಾಸರಗೋಡು: ಮೋಟಾರು ವಾಹನ ಇಲಾಖೆಗೆ ಸಂಬಂದಿಸಿದ ದೂರುಗಳು, ತೀರ್ಮಾನಿಸಿದ ಅರ್ಜಿಗಳಿಗೆ ಪರಿಹಾರವನ್ನು ಕಾಣಲು, ತೀರ್ಪಿಗಾಗಿ ವಾಹನ ಗಳಿಗೆ ಸಂಬಂದಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರಿಗೆ ಸಚಿವರ 'ವಾಹನೀಯಂ'ಸಾರಿಗೆ ಅದಾಲತ್ ಅಕ್ಟೋಬರ್ 14ರಂದು ಕಾಸರಗೋಡು ನಗರಭವನದಲ್ಲಿ ನಡೆಯಲಿದೆ. ಈ ಸಂದರ್ಭ ಸಾರಿಗೆ ಸಚಿವ ವಕೀಲ ಆಂಟನಿ ರಾಜು ಸಾರ್ವಜನಿಕರಿಂದ ನೇರವಾಗಿ ದೂರುಗಳನ್ನು ಸ್ವೀಕರಿಸಿ ಸಮಸ್ಯೆ ಗಳಿಗೆ ಪರಿಹಾರ ಒದಗಿಸಲಿದ್ದಾರೆ.
ಅದಾಲತ್ ನಲ್ಲಿ ಪರಿಗಣಿಸಬೇಕಾದ ದೂರುಗಳನ್ನು ಅಕ್ಟೋಬರ್ 7 ರಂದು ಸಂಜೆ 5 ಗಂಟೆಯೊಳಗೆ ಪ್ರಾದೇಶಿಕ ಸಾರಿಗೆ ಕಚೇರಿ ಕಾಸರಗೋಡು, ಸಬ್ ಆರ್‍ಟಿ ಕಛೇರಿ ಕಾಞಂಗಾಡ್ ಮತ್ತು ಸಬ್ ಆರ್‍ಟಿ ಕಛೇರಿ ವೆಳ್ಳರಿಕುಂಡ್‍ನಲ್ಲಿ ಸ್ವೀಕರಿಸಲಾಗುವುದು. ಆರ್‍ಟಿ ಕಛೇರಿಗಳಲ್ಲಿ ವಿವಿಧ ಸೇವೆಗಳಿಗೆ ಅರ್ಜಿ ಸಲ್ಲಿಸಿ ಇಲ್ಲಿಯವರೆಗೆ ಆರ್‍ಸಿ, ಡ್ರೈವಿಂಗ್ ಲೈಸೆನ್ಸ್, ಪರ್ಮಿಟ್ ಮುಂತಾದ ದಾಖಲೆಗಳನ್ನು ಪಡೆಯದಿರುವವರು ದೂರು ನೀಡಲು ಆಯಾ ಕಛೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ಸಂಪರ್ಕಿಸಬೇಕು. ಅಂಚೆಯ ಮೂಲಕ ಕಳುಹಿಸಿದ ದಾಖಲೆಗಳನ್ನು ಮಾಲೀಕರು ಸ್ವೀಕರಿಸದ ಹಿನ್ನೆಲೆಯಲ್ಲಿ ಕಚೇರಿಗೆ ವಾಪಸಾದ ದಾಖಲೆಗಳನ್ನು ಅದಾಲತ್‍ನಲ್ಲಿ ವಿತರಿಸಲಾಗುವುದು ಎಂದು ಆರ್‍ಟಿಒ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಆರ್ ಟಿ ಒ ಕಾಸರಗೋಡು(04994 255290, 9495831697), ಎಸ್ ಆರ್ ಟಿ ಒ ಕಾಞಂಗಾಡ್(04672 207766, 9400461291), ಎಸ್ ಆರ್ ಟಿ ಒ ವೆಳ್ಳರಿಕುಂಡ್(04672 986042, 9847328257)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅ. 14ರಂದು ಕಾಸರಗೋಡಿನಲ್ಲಿ ಸಾರಿಗೆ ಸಚಿವರ 'ವಾಹನೀಯಂ' ಸಾರಿಗೆ ಅದಾಲತ್
0
ಸೆಪ್ಟೆಂಬರ್ 29, 2022
Tags