ತಿರುವನಂತಪುರ: ಓಣಂ ಆಚರಣೆಯ ನಂತರ ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಓಣಂ ಸಮಯದಲ್ಲಿ ಒಟ್ಟು 15,000 ಕೋಟಿ ರೂ.ಒಮ್ಮಿಂದೊಮ್ಮೆಗೆ ಖಜಾನೆಯಿಂದ ಖರ್ಚುಮಾಡಿರುವುದು ಬಿಕ್ಕಟ್ಟಿಗೆ ಕಾರಣವಾಗಲಿದೆ.
ಇದರಿಂದ ಖಜಾನೆ ಖಾಲಿಯಾಗಿದೆ. ಹೀಗಿರುವಾಗ ಖರ್ಚು-ವೆಚ್ಚ ಕಡಿಮೆ ಮಾಡಿ ಆರ್ಥಿಕ ಮುಗ್ಗಟ್ಟು ಎದುರಿಸಲು ಹಣಕಾಸು ಇಲಾಖೆ ಸಿದ್ಧತೆ ನಡೆಸಿದೆ.
ಮುಂದಿನ ದಿನಗಳಲ್ಲಿ ಖಜಾನೆ ಮೇಲೆ ನಿರ್ಬಂಧ ಹೇರಲು ಚಿಂತನೆ ನಡೆದಿದೆ. ವೆಚ್ಚವನ್ನು ಎಷ್ಟು ನಿರ್ಬಂಧಿಸಬೇಕು ಎಂಬುದನ್ನು ಶೀಘ್ರದಲ್ಲೇ ಪರಿಗಣಿಸಲಾಗುವುದು. ಕಿಟ್ ಸೇರಿದಂತೆ ಉಚಿತ ಯೋಜನೆಗಳು ರಾಜ್ಯವನ್ನು ಇಷ್ಟು ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿಸಿದೆ ಎಂದು ಅಂದಾಜಿಸಲಾಗಿದೆ.
ಬಿಕ್ಕಟ್ಟನ್ನು ಪರಿಹರಿಸಲು ಕೇಂದ್ರವು ಸಹಾಯ ಮಾಡಬೇಕು ಎಂದು ಕೇಳುವ ನಿರೀಕ್ಷೆಯಿದೆ. ಕೇಂದ್ರದಿಂದ ವಿತ್ತೀಯ ಕೊರತೆ ಅನುದಾನ ಮತ್ತು ಜಿಎಸ್‍ಟಿ ಹಂಚಿಕೆ ಮಾತ್ರ ಪರಿಹಾರವಾಗಿದೆ. ಇದು ಲಭಿಸದಿದ್ದರೆ, ಓವರ್‍ಡ್ರಾಫ್ಟ್ ತೆಗೆದುಕೊಳ್ಳಬೇಕಾಗುತ್ತದೆ. ದಿನನಿತ್ಯದ ಖರ್ಚಿಗಾಗಿ ರಿಸರ್ವ್ ಬ್ಯಾಂಕಿನಿಂದ 1680 ಕೋಟಿಗಳವರೆಗೆ ತೆಗೆದುಕೊಳ್ಳಬಹುದು.
ಇದೇ ವೇಳೆ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಮಾತನಾಡಿ, ಹಣಕಾಸಿನ ತೊಂದರೆಗಳಿವೆ. ಆದರೆ ಓವರ್‍ಡ್ರಾಫ್ಟ್ ಪಡೆಯುವ ಅಗತ್ಯ ಬಾರದು. ಕೇಂದ್ರ ಹಣ ನೀಡದಿದ್ದರೆ ಭವಿಷ್ಯದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ ಎಂದು ಸಚಿವರು ವಾಗ್ದಾಳಿ ನಡೆಸಿದರು.
ಕಿಟ್ ಸೇರಿದಂತೆ 15,000 ಕೋಟಿಗಳು ಒಂದೇ ಬಾರಿಗೆ ಖಾಲಿ: ರಾಜ್ಯದ ಖಜಾನೆ ಬಿಕ್ಕಟ್ಟಿನತ್ತ?
0
ಸೆಪ್ಟೆಂಬರ್ 11, 2022
Tags