ತಿರುವನಂತಪುರ: ಹರತಾಳದ ಮರೆಯಲ್ಲಿ ಪಾಪ್ಯುಲರ್ ಫ್ರಂಟ್ ದಾಳಿಕೋರರು ಬೀದಿಗಿಳಿದು ಹಿಂಸಾಚಾರ ನಡೆಸಿದ್ದಾರೆ. ದಾಳಿಕೋರರು ಲಕ್ಷಾಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಹಣವನ್ನು ನಾಶಪಡಿಸಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾಜ್ಯದಲ್ಲಿ 157 ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಪೋಲೀಸರು ಮಾಹಿತಿ ನೀಡಿದ್ದಾರೆ. ವಿವಿಧ ಹಿಂಸಾಚಾರಗಳಲ್ಲಿ ಶಂಕಿತರೆಂದು 170 ಜನರನ್ನು ಬಂಧಿಸಲಾಗಿದೆ. 368 ಮಂದಿಯನ್ನು ಪೂರ್ವ ಸೂಚಚಿತವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.ಮಲಪ್ಪುರಂ ಜಿಲ್ಲೆಯೊಂದರಲ್ಲೇ 128 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. 15 ಪ್ರಕರಣಗಳಲ್ಲಿ 56 ಜನರನ್ನು ಬಂಧಿಸಲಾಗಿದೆ.
ಹರತಾಳ ನೆಪದಲ್ಲಿ ಪಾಪ್ಯುಲರ್ ಫ್ರಂಟ್ ನವರು ಕಲ್ಲು ತೂರಾಟ ನಡೆಸಿ 70 ಕೆಎಸ್ ಆರ್ ಟಿಸಿ ಬಸ್ ಗಳನ್ನು ಧ್ವಂಸಗೊಳಿಸಿದ್ದಾರೆ. ದಕ್ಷಿಣ ವಲಯದಲ್ಲಿ 30, ಕೇಂದ್ರ ವಲಯದಲ್ಲಿ 25 ಮತ್ತು ಉತ್ತರ ವಲಯದಲ್ಲಿ 15 ಬಸ್‍ಗಳು ಜಖಂಗೊಂಡಿವೆ. ಹಿಂಸಾಚಾರದಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ವಲಯದಲ್ಲಿ ಮೂವರು ಚಾಲಕರು ಮತ್ತು ಇಬ್ಬರು ಕಂಡಕ್ಟರ್‍ಗಳು, ಕೇಂದ್ರ ವಲಯದಲ್ಲಿ ಮೂವರು ಚಾಲಕರು ಮತ್ತು ಒಬ್ಬ ಪ್ರಯಾಣಿಕ ಮತ್ತು ಉತ್ತರ ವಲಯದಲ್ಲಿ ಇಬ್ಬರು ಚಾಲಕರು ಗಾಯಗೊಂಡಿದ್ದಾರೆ.
50 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಕೆಎಸ್‍ಆರ್‍ಟಿಸಿ ಅಂದಾಜಿಸಿದೆ. ನಷ್ಟ ಸಂಭವಿಸಿದರೂ ಸಾರ್ವಜನಿಕ ಸಾರಿಗೆಗೆ ತೊಂದರೆಯಾಗದಂತೆ ಕೆಎಸ್‍ಆರ್‍ಟಿಸಿ ಸೇವೆಯನ್ನು ನಡೆಸಲು ಬದ್ಧವಾಗಿದೆ ಎಂದು ಹೇಳಿದರು.
ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡಿದ್ದಕ್ಕಾಗಿ ದಾಳಿಕೋರರ ವಿರುದ್ಧ ಪಿಡಿಪಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೆಎಸ್‍ಆರ್‍ಟಿಸಿಗೆ ಆಗಿರುವ ನಷ್ಟವನ್ನು ವಸೂಲಿ ಮಾಡಲು ಕೆಎಸ್‍ಆರ್‍ಟಿಸಿ ಕಾನೂನು ಕ್ರಮಕ್ಕೆ ಮುಂದಾಗಲಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಸ್ಪಷ್ಟಪಡಿಸಿದ್ದಾರೆ.
ಹರತಾಳವೋ ಅಥವಾ ಗಲಭೆ ಯತ್ನವೋ? ; ರಾಜ್ಯದಲ್ಲಿ 157 ಪ್ರಕರಣಗಳು ದಾಖಲು: 170 ಮಂದಿಯ ಬಂಧನ; ಮೀಸಲು ಬಂಧನದಲ್ಲಿ 368 ಮಂದಿ
0
ಸೆಪ್ಟೆಂಬರ್ 23, 2022
Tags