ಕಾಸರಗೋಡು: ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಆಯೋಜಿಸುವ ಯುವ ಉತ್ಸವದ ಜಿಲ್ಲಾ ಸ್ಪರ್ಧೆಯು ಅಕ್ಟೋಬರ್ 15 ರಂದು ಪಡನ್ನಕ್ಕಾಡ್‍ನ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ. ವಾಟರ್ ಕಲರ್, ಕವಿತಾ ರಚನೆ (ಮಲಯಾಳಂ), ಭಾಷಣ (ಇಂಗ್ಲಿμï/ಹಿಂದಿ), ಮೊಬೈಲ್ ಫೆÇೀಟೋಗ್ರಫಿ, ಯೂತ್ ಡಿಬೇಟ್ (ಮಲಯಾಳಂ) ಮತ್ತು ಜಾನಪದ ನೃತ್ಯ (ಗುಂಪು) ಎಂಬೀ ಸ್ಪರ್ಧೆಗಳು ನಡೆಯಲಿದೆ. ವಿಜೇತರಿಗೆ ನಗದು ಪ್ರಶಸ್ತಿ, ಪ್ರಮಾಣಪತ್ರ ಮತ್ತು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿರಲಿದೆ. ಒಬ್ಬರಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಬಹುದು. ವಯಸ್ಸಿನ ಮಿತಿ 15 ರಿಂದ 29 ವರ್ಷಗಳ ನಡುವೆ. ಆಸಕ್ತರು ಅಕ್ಟೋಬರ್ 9 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ದೂರವಾಣಿ 7736426247, 8136921959, 7012172158.
ಅಕ್ಟೋಬರ್ 15 ರಂದು ಯುವ ಉತ್ಸವ ಜಿಲ್ಲಾ ಮಟ್ಟದ ಸ್ಪರ್ಧೆ
0
ಸೆಪ್ಟೆಂಬರ್ 27, 2022