ಮುಂಬೈ: ಗಣೇಶ ಚತುರ್ಥಿಯ ಐದನೇ ದಿನವಾದ ಭಾನುವಾರ ಮುಂಬೈನಲ್ಲಿ ಕನಿಷ್ಠ 166 ಮೂರ್ತಿಗಳನ್ನು ಸಮುದ್ರದಲ್ಲಿ ಮತ್ತು ಕೃತಕ ಕೊಳಗಳಲ್ಲಿ ವಿಸರ್ಜನೆ ಮಾಡಲಾಯಿತು ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ತಿಳಿಸಿದರು.
ಮಧ್ಯಾಹ್ನದ ವೇಳೆಗೆ ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸುಮಾರು 160 ಗಣೇಶ ಮೂರ್ತಿಗಳು ಮತ್ತು 6 ಸಾರ್ವಜನಿಕ ಮೂರ್ತಿಗಳನ್ನು (ಹರ್ತಾಲಿಕಾ) ವಿಸರ್ಜನೆ ಮಾಡಲಾಗಿದೆ. ಈ ಪೈಕಿ ಮನೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ 45 ಮೂರ್ತಿಗಳು ಮತ್ತು ಐದು ಸಾವರ್ಜನಿಕ ಮೂರ್ತಿಗಳನ್ನು ನಗರದ ವಿವಿಧೆಡೆ ಇರುವ ಕೃತಕ ಕೊಳಗಳಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಅವರು ತಿಳಿದಿದ್ದಾರೆ.