HEALTH TIPS

ಗೇಮಿಂಗ್​ ಆಯಪ್​ನಿಂದ ಬಳಕೆದಾರರಿಗೆ ಟೋಪಿ: ಆರು ಕಡೆ ಇ.ಡಿ ದಾಳಿ- 17 ಕೋಟಿ ರೂ. ಜಪ್ತಿ

 

                   ಕೋಲ್ಕತಾ: 'ಇ-ನಗ್ಗೆಟ್ಸ್‌' ಎಂಬ ಮೊಬೈಲ್‌ ಗೇಮಿಂಗ್‌ ಆಯಪ್‌ ಮೂಲಕ ಜನರಿಗೆ ಮಹಾವಂಚನೆ ಮಾಡುತ್ತಿದ್ದವರ ಜಾಡು ಹಿಡಿದು ಹೋದ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ತಂಡ ಕೋಲ್ಕತಾದ 6 ಕಡೆಗಳಲ್ಲಿ ದಾಳಿ ನಡೆಸಿ 17 ಕೋಟಿ ರೂ. ನಗದು ಹಾಗೂ ಮಹತ್ವದ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.

ಮೊಬೈಲ್ ಗೇಮಿಂಗ್ ಜತೆಗೆ ಅಕ್ರಮ ಹಣ ವರ್ಗಾವಣೆಯಲ್ಲೂ 'ಇ-ನಗ್ಗೆಟ್ಸ್‌' ತಂಡ ಶಾಮೀಲಾಗಿತ್ತು ಎಂದು ತಿಳಿದು ಬಂದಿದೆ.

                   'ಇ-ನಗ್ಗೆಟ್ಸ್‌' ಗೇಮಿಂಗ್‌ ಆಯಪ್‌ ಪ್ರವರ್ತಕ, ಉದ್ಯಮಿ ಆಮೀರ್ ಖಾನ್ ಹಾಗೂ ಇನ್ನೋರ್ವ ಉದ್ಯಮಿ ನಿಸಾರ್ ಅಹ್ಮದ್ ಖಾನ್ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ದಾಳಿಯ ಸಮಯದಲ್ಲಿ 17.32 ಕೋಟಿ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ. 2000, 500 ಹಾಗೂ 100 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಎಣಿಕೆ ಕಾರ್ಯ ಇನ್ನೂ ಮುಂದುವರೆದಿದೆ. ಆಯಪ್‌ಗೆ ಚೀನಾ ಮೂಲದ ನಂಟಿನ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

                      ಆಯಪ್‌ ಬಳಕೆದಾರರರಿಗೆ ಠೇವಣಿ ಮೇಲೆ ಭಾರಿ ಕಮಿಷನ್‌ ನೀಡುವ ಆಮಿಷವೊಡ್ಡಿ ದೊಡ್ಡ ಮೊತ್ತದಲ್ಲಿ ಹಣ ಸಂಗ್ರಹಿಸಿ, ವಾಪಸ್‌ ನೀಡದೇ ವಂಚಿಸಲಾಗಿದೆ. ಈ ಬಗ್ಗೆ ಅನೇಕರಿಂದ ದೂರುಗಳು ಬಂದಿದ್ದವು, ಜತೆಗೆ, ಗೇಮಿಂಗ್‌ ಆಯಪ್‌ಗಳ ಖಾತೆಯಲ್ಲಿನ ವ್ಯವಹಾರದಲ್ಲಿ ಸಾಕಷ್ಟು ಗೋಲ್‌ಮಾಲ್‌ ನಡೆದಿದೆ ಎಂಬ ಬಗ್ಗೆ ಫೆಡರಲ್‌ ಬ್ಯಾಂಕ್‌ ಅಧಿಕಾರಿಗಳು ಕೂಡಾ ಕೋಲ್ಕತಾ ಪೊಲೀಸರಿಗೆ ನೀಡಿದ್ದರು. ಇವೆಲ್ಲವನ್ನೂ ಆಧರಿಸಿ ಈ ದಾಳಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ 2021ರ ಫೆಬ್ರವರಿಯಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

                               ಏನಿದು ಹಗರಣ?
               'ಇ-ನಗ್ಗೆಟ್ಸ್‌' ಆಯಪ್ ಡೌನ್‌ಲೋಡ್ ಮಾಡಿದ ನಂತರ ಸ್ವಲ್ಪ ಹಣವನ್ನು ಮೊದಲು ಬಳಕೆದಾರರು ಠೇವಣಿ ಇಡಬೇಕು. ಆರಂಭದಲ್ಲಿ, ಗೇಮಿಂಗ್ ಪ್ರಕ್ರಿಯೆಯಲ್ಲಿ ಬಹುಮಾನದ ಹೆಸರಿನಲ್ಲಿ ಗೆದ್ದ ಹಣವನ್ನು ತಕ್ಷಣವೇ ಹಿಂಪಡೆಯಲು ಅವಕಾಶವನ್ನು ನೀಡಲಾಗುತ್ತದೆ. ಇದರಿಂದ ಹೆಚ್ಚು ಬಹುಮಾನ ಪಡೆಯುವ ಆಸೆಗೆ ಬಿದ್ದು, ಬಳಕೆದಾರರು ಹೆಚ್ಚು ಹಣವನ್ನು ಠೇವಣಿ ಮಾಡುತ್ತಾರೆ. ಹೀಗೆ ಆಮಿಷ ಕೂಡ ಒಡ್ಡಲಾಗುತ್ತದೆ. ಹೆಚ್ಚು ಠೇವಣಿ ಇಟ್ಟರೆ ಹೆಚ್ಚು ಆಫರ್ ಎನ್ನುವ ಮೂಲಕ ಈ ಗೇಮ್ ಪ್ರಾರಂಭಿಸಲಾಗುತ್ತದೆ. ಅಲ್ಲಿಂದಲೇ ಶುರುವಾಗುವುದು ಮೋಸದಾಟ. ಹೆಚ್ಚು ಹೆಚ್ಚು ಹಣ ಠೇವಣಿ ಇಡುತ್ತಾ ಹೋದಂತೆ ಹಣವನ್ನು ವಾಪಸ್​ ಪಡೆಯುವ ಪ್ರಕ್ರಿಯೆ ನಿಂತುಹೋಗಿ ಬಳಕೆದಾರ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries