ಕುಂಬಳೆ: ಶ್ರೀವಿಶ್ವಕರ್ಮ ಕಬ್ಬಿಣ ಕರಕುಶಲ ಕಾರ್ಮಿಕರ ಸಂಘದ 5ನೇ ವಾರ್ಷಿಕೋತ್ಸವದ ಅಂಗವಾಗಿ ವಿಶ್ವಕರ್ಮ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಸೆ.18ರಂದು ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ಜರಗಲಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಪೂಜೆ ಆರಂಭ ಬಳಿಕ ಧಾರ್ಮಿಕ ಸಭೆ, ಪ್ರತಿಭಾ ಪುರಸ್ಕಾರ ಪ್ರದಾನ ನಡೆಯಲಿದೆ. ಇದರ ಯಶಸ್ವಿಗಾಗಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಕೆ.ಪಿ.ಕೇಶವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.ಆಶೋಕ ಆಚಾರ್ಯ ಹೊಸಂಗಡಿ, ರಾಧಾಕೃಷ್ಣ ಆಚಾರ್ಯ ಪೆರ್ಲ, ಸುಬ್ರಹ್ಮಣ್ಯ ಆಚಾರ್ಯ ಕೋಟೂರು, ಲವ ಆಚಾರ್ಯ ಕೊಲ್ಲಂಗಾನ, ಸೋಮನಾಥ ಆಚಾರ್ಯ ಬಾಳೆಮೂಲೆ, ಪದ್ಮನಾಭ ಆಚಾರ್ಯ ಮಧೂರು, ನಾರಾಯಣ ಆಚಾರ್ಯ ಕಾಸರಗೋಡು, ಲಕ್ಷ್ಮಣ ಆಚಾರ್ಯ ಪ್ರತಾಪನಗರ, ಶಿವರಾಮ ಆಚಾರ್ಯ ಮಣಿಯೂರು, ನಾರಾಯಣ ಆಚಾರ್ಯ ಅರಮಂಗಾನ, ಜನಾರ್ಧನ ಆಚಾರ್ಯ ಮೀಯಪದವು, ವೆಂಕಟ್ರಮಣ ಆಚಾರ್ಯ ಅಡೂರು, ಸತೀಶ ಆಚಾರ್ಯ ಉಳಿಯ ಮೊದಲಾದವರು ಉಪಸ್ಥಿತರಿದ್ದರು. ರವೀಂದ್ರ ಆಚಾರ್ಯ ಮುಳ್ಳೇರಿಯ ಪ್ರಾರ್ಥನೆಗೈದರು. ಚಂದ್ರಶೇಖರ ಆಚಾರ್ಯ ಸ್ವಾಗತಿಸಿ, ದಾಮೋದರ ಮವ್ವಾರು ವಂದಿಸಿದರು.
ಸೆ.18ಕ್ಕೆ ಸೀತಾಂಗೋಳಿಯಲ್ಲಿ ವಿಶ್ವಕರ್ಮ ಕಬ್ಬಿಣ ಕರಕುಶಲ ಕಾರ್ಮಿಕರ ಸಂಘದ 5ನೇ ವಾರ್ಷಿಕೋತ್ಸವ: ವಿಶ್ವಕರ್ಮ ಪೂಜೆ
0
ಸೆಪ್ಟೆಂಬರ್ 07, 2022