ನವದೆಹಲಿ: ದೇಶದಲ್ಲಿ 2014ರಲ್ಲಿ ಐದು ನಗರಗಳಲ್ಲಷ್ಟೇ ಮೆಟ್ರೋ ರೈಲು ಸೇವೆ ಇತ್ತು, ಅದು ಈಗ 20 ನಗರಗಳಿಗೆ ವಿಸ್ತರಣೆಗೊಂಡು 'ಮೆಟ್ರೋ ಕ್ರಾಂತಿ' ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2014ರಲ್ಲಿ ದೇಶದ ಒಟ್ಟು ಮೆಟ್ರೋ ಜಾಲ 248 ಕಿ.ಮೀ.
ಇಂದು ದೇಶದಲ್ಲಿ ಒಟ್ಟು 775 ಕಿ.ಮೀ ಇದೆ. ಇನ್ನೂ 1,000 ಕಿಲೋ ಮೀಟರ್ ಮೆಟ್ರೋ ರೈಲು ಮಾರ್ಗ ನಿರ್ಮಾಣ ಹಂತದಲ್ಲಿದೆ. ಇದು ಮೋದಿ ಸರ್ಕಾರದಲ್ಲಿ ದೇಶದಲ್ಲಿ ನಡೆಯುತ್ತಿರುವ ಮೆಟ್ರೋ ಕ್ರಾಂತಿಯ ಭಾಗವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪೆಟ್ಟಾದಿಂದ ಎಸ್‌ಎನ್ ಜಂಕ್ಷನ್‌ವರೆಗೆ ಕೊಚ್ಚಿ ಮೆಟ್ರೋ ರೈಲು ಯೋಜನೆಯ ಮೊದಲ ಹಂತದ ವಿಸ್ತರಣೆಯನ್ನು ಮೋದಿ ಅವರು ಗುರುವಾರ ಉದ್ಘಾಟಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ಕೊಚ್ಚಿ ಮೆಟ್ರೋ ರೈಲು ಯೋಜನೆಯು ದೇಶದ ಅತ್ಯಂತ ಸುಸ್ಥಿರ ಮೆಟ್ರೋ ಯೋಜನೆಗಳಲ್ಲಿ
ಒಂದಾಗಿದ್ದು, ಸೌರ ವಿದ್ಯುತ್ ಮೂಲಕ ಶೇಕಡಾ 55 ರಷ್ಟು ಇಂಧನ ಅಗತ್ಯಗಳನ್ನು ಪೂರೈಸಲಿದೆ
ಎಂದು ಅಧಿಕಾರಿ ಹೇಳಿದರು.