ಕಾಸರಗೋಡು: ಕಲೆ, ಕ್ರೀಡೆ, ಸಾಹಿತ್ಯ, ವಿಜ್ಞಾನ, ಸಾಮಾಜಿಕ, ಪರಿಸರ ರಕ್ಷಣೆ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ತೋರುವ 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಉಜ್ವಲ ಬಾಲ್ಯ ಪ್ರಶಸ್ತಿ ನೀಡಲಾಗುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಶಸ್ತಿ ಆಯೋಜಿಸಲಾಗಿದ್ದು, ಐಟಿ, ಕೃಷಿ, ತ್ಯಾಜ್ಯ ನಿರ್ವಹಣೆ, ಜೀವಕಾರುಣ್ಯ ಕೆಲಸ, ಕರಕುಶಲ, ಶಿಲ್ಪಕಲೆ ತಯಾರಿಕೆ ಮತ್ತು ಅಸಾಧಾರಣ ಧೈರ್ಯದಿಂದ ಕೆಲಸ ಮಾಡಿದ ಮಕ್ಕಳಿಗೆ 'ಉಜ್ವಲ ಬಾಲ್ಯಂ' ಪ್ರಶಸ್ತಿಯನ್ನು ನೀಡಲಾಗುತ್ತದೆ.
ಜಿಲ್ಲೆಯ ಒಟ್ಟು ನಾಲ್ಕು ಮಕ್ಕಳನ್ನು ಎರಡು ವಿಭಾಗಗಳಲ್ಲಾಗಿ ಪುರಸ್ಕರಿಸಲಾಗುತ್ತದೆ. ಸಾಮಾನ್ಯ ವಿಭಾಗದಲ್ಲಿ 6ರಿಂದ 11 ಹಾಗೂ 12ರಿಂದ 18ವರ್ಷ ಹಾಗೂ 6ರಿಂದ 11 ವರ್ಷ ಮತ್ತು 12-18 ವರ್ಷದ ವಿಕಲಚೇತನ ಮಕ್ಕಳ ವಿಭಾಗದಲ್ಲಿ ಪ್ರಶಸ್ತಿ ಇರಲಿದೆ. ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು 25,000 ರೂ. ನಗದು ಲಭಿಸಲಿದೆ. ಜನವರಿ 1, 2021 ಮತ್ತು ಡಿಸೆಂಬರ್ 31, 2021 ರ ನಡುವೆ ಪ್ರಾವೀಣ್ಯತೆ ಪ್ರದರ್ಶಿಸಿದ ಮಕ್ಕಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಈ ಬಗ್ಗೆ ಪಡೆದ ಪ್ರಮಾಣ ಪತ್ರಗಳು, ಮಾನ್ಯತಾ ಪತ್ರಗಳು, ಮಗುವಿನ ಹೆಸರಿನಲ್ಲಿ ಪ್ರಕಟವಾಗಿರುವ ಪುಸ್ತಕಗಳ ಪ್ರತಿಗಳು, ಕಲಾತ್ಮಕ ಪ್ರದರ್ಶನಗಳನ್ನು ಒಳಗೊಂಡ ಸಿಡಿಗಳು, ಪೆನ್ ಡ್ರೈವ್ ಮತ್ತು ದಿನಪತ್ರಿಕೆ ಟಿಪ್ಪಣಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಒಮ್ಮೆ "ಉಜ್ವಲ ಬಾಲ್ಯ "ಪ್ರಶಸ್ತಿ ಪಡೆದ ಮಕ್ಕಳನ್ನು ಮತ್ತು ಅಸಾಧಾರಣ ಸಾಧನೆಗಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಬಾಲ ಪ್ರಶಸ್ತಿ ಪಡೆದ ಮಕ್ಕಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
ಅರ್ಜಿ ನಮೂನೆಯನ್ನು ಕಾಸರಗೋಡು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಛೇರಿಯಿಂದ ಪಡೆಯಬಹುದು. ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30. ವಿವರಗಳು ಮತ್ತು ಅರ್ಜಿ ನಮೂನೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೆಬ್‍ಸೈಟ್ www.wcd.kerala.gov.in ನಲ್ಲಿ ಲಭ್ಯವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 04994256990. ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
"ಉಜ್ವಲ ಬಾಲ್ಯಂ-2021' ಪ್ರಶಸ್ತಿಗೆ ಅರ್ಜಿ ಆಹ್ವಾನ
0
ಸೆಪ್ಟೆಂಬರ್ 06, 2022
Tags