ಕುಂಬಳೆ: ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷ, ತುಳು ರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಜಯಂತಿ ಪ್ರಯುಕ್ತ ತುಳು ವಲ್ರ್ಡ್ ಮಂಗಳೂರು ಮತ್ತು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಪುವೆಂಪು ಅಭಿಮಾನಿಗಳು ಆಯೋಜಿಸುವ ಪುವೆಂಪು ನೆಂಪು 2022 ಮತ್ತು ತುಳು ಲಿಪಿ ದಿನ ಅಕ್ಟೋಬರ್ 10 ರಂದು ಅನಂತಪುರದಲ್ಲಿ ನಡೆಯಲಿದೆ.
ಇದರ ಅಂಗವಾಗಿ ಈ ಕಾರ್ಯಕ್ರಮದ ಯಶಸ್ವಿಗಾಗಿ ಸಮಾಲೋಚನ ಸಭೆ ಸೆ.4 ರಂದು ಬೆಳಗ್ಗೆ 10 ಗಂಟೆಗೆ ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನ ಪರಿಸರದಲ್ಲಿ ನಡೆಯಲಿದೆ. ತುಳು ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.
ಪುವೆಂಪು ನೆಂಪು 2022 ಮತ್ತು ತುಳು ಲಿಪಿ ದಿನ: ನಾಳೆ ಸಮಾಲೋಚನ ಸಭೆ
0
ಸೆಪ್ಟೆಂಬರ್ 03, 2022