ಕಾಸರಗೋಡು: ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬ್ಲಾಕ್ ಮಟ್ಟದ ಓಣಂ ಸಮೃದ್ಧಿ- 2022 ರೈತ ಮಾರುಕಟ್ಟೆಯನ್ನು ಕರಂದಕ್ಕಾಡಿನ ಇಕೋಶಾಪ್‍ನಲ್ಲಿ ಶಾಸಕ ಎನ್. ಎ. ನೆಲ್ಲಿಕುನ್ನು ಉದ್ಘಾಟಿಸಿದರು.
ಕಾಸರಗೋಡು ನಗರಸಭಾ ಅಧ್ಯಕ್ಷ, ವಕೀಲ ವಿ. ಎಂ. ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆ ಉಪ ನಿರ್ದೇಶಕಿ ಕೆ. ನಿಶಾ ಭಾಯಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇಕೋಶಾಪ್ ಕಾರ್ಯದರ್ಶಿ ಎ. ವಿಜಯನ್, ಇಕೋಶಾಪ್ ಅಧ್ಯಕ್ಷ ವಿ. ಸುಬ್ರಹ್ಮಣ್ಯ ಭಟ್, ಕಾರ್ಯನಿರ್ವಾಹಕ ಸದಸ್ಯ ಕೆ. ಎಂ. ಅಬ್ದುಲ್ ನಿಸಾರ್, ಕೋಶಾಧಿಕಾರಿ ಕೆ. ಎ. ಮುಹಮ್ಮದ್ ಬಶೀರ್ ಉಪಸ್ಥಿತರಿದ್ದರು. ಸಹಾಯಕ ಕೃಷಿ ನಿರ್ದೇಶಕಿ ಅನಿತಾ ಕೆ ಮೆನನ್ ಸ್ವಾಗತಿಸಿದರು. ಕೃಷಿ ಕ್ಷೇತ್ರಾಧಿಕಾರಿ ಎಂ. ಪಿ ಶ್ರೀಜಾ ವಂದಿಸಿದರು.
ಬ್ಲಾಕ್ ಮಟ್ಟದ ಓಣಂ ಸಮೃದ್ಧಿ: 2022 ರೈತ ಮಾರುಕಟ್ಟೆ ಉದ್ಘಾಟನೆ
0
ಸೆಪ್ಟೆಂಬರ್ 05, 2022