ಕಾಸರಗೋಡು: ಕೃಷಿ ಇಲಾಖೆಯ ಓಣಂ ಹಣ್ಣು ತರಕಾರಿ ಮಾರುಕಟ್ಟೆ ಆರಂಭಗೊಂಡಿದ್ದು, ಕಾಞಂಗಾಡು ಪುರಸಭೆ ಕೃಷಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಶಾಸಕ ಇ.ಚಂದ್ರಶೇಖರನ್ ನೆರವೇರಿಸಿದರು. ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಯೋಜನೆ ಬಗ್ಗೆ ಮಾಃಇತಿ ನೀಡಿದರು.
ಕಾಞಂಗಾಡು ನಗರಸಭಾ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲತಾ, ಕಾಞಂಗಾಡು ನಗರಸಭಾ ಸದಸ್ಯ ಕೆ.ಕೆ.ಬಾಬು, ಕೃಷಿ ಉಪ ನಿರ್ದೇಶಕಿ ವಿ.ಅನಿತಾ, ಸಹಾಯಕ ಕೃಷಿ ನಿರ್ದೇಶಕಿ ಡಾ.ಶೀಬಾ ಉಪಸ್ಥಿತರಿದ್ದರು. ಕೃಷಿ ಸಹಾಯಕ ಮಾರುಕಟ್ಟೆ ನಿರ್ದೇಶಕಿ ಎನ್.ಮೀರಾ ಸ್ವಾಗತಿಸಿದರು. ಕೃಷಿ ಕ್ಷೇತ್ರಾಧಿಕಾರಿ ಕೆ.ಮುರಳೀಧರನ್ ವಂದಿಸಿದರು.
ಜಿಲ್ಲೆಯ ವಿವಿಧೆಡೆ 57 ಮಾರುಕಟ್ಟೆಗಳು ಆರಂಭವಾಗುತ್ತಿದ್ದು, ಸೆ. 4 ರಿಂದ 7 ರವರೆಗೆ ನಾಲ್ಕು ದಿನಗಳ ಕಾಲ ಮಾರುಕಟ್ಟೆಗಳು ತೆರೆದು ಕಾರ್ಯಾಚರಿಸಲಿದೆ.
ಮಾರುಕಟ್ಟೆಗಳನ್ನು ಕೃಷಿ ಇಲಾಖೆ, ಹಾರ್ಟಿಕಾರ್ಪ್, ವಿಎಫ್‍ಪಿಸಿ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಜಂಟಿಯಾಗಿ ನಡೆಸುತ್ತವೆ.
'ಓಣಂ ಸಮೃದ್ಧಿ 2022'- ರೈತರ ಮಾರುಕಟ್ಟೆಗಳಿಗೆ ಚಾಲನೆ
0
ಸೆಪ್ಟೆಂಬರ್ 06, 2022
Tags