ಕಾಸರಗೋಡು: ಶಾಲ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಕಾಸರಗೋಡು ಪೆರುಂಬಳಕಡವು ಎಂಬಲ್ಲಿ ಮಗುಚಿಬಿದ್ದ ಪರಿಣಾಮ 20ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ವಿದ್ಯಾನಗರ ಚಾಲ ಬೆದಿರದಲ್ಲಿ ಚಟುವಟಿಕೆ ನಡೆಸುತ್ತಿರುವ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಮಧ್ಯೆ ಅಪಘಾತಕ್ಕೀಡಾಗಿದೆ. ಗಾಐಗೊಂಡವರಲ್ಲಿ ಎಲ್‍ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ಇಳಿಜಾರಿನಲ್ಲಿ ಚಾಲಕನ ಆಯತಪ್ಪಿ ಬಸ್ ಒಳಚರಂಡಿಗೆ ಅಳವಡಿಸಿದ್ದ ಕಗ್ಗಲ್ಲಿನ ಗೋಡೆ ದಾಟಿ ಮುಂದಕ್ಕೆ ಸಾಗಿ ಮಗುಚಿ ಬಿದ್ದಿದೆ. ಬಸ್ಸಿಗೂ ಹೆಚ್ಚಿನ ಹಾನಿಯುಂಟಾಗಿದೆ.
ಹೆಚ್ಚಿನ ಗಾಯಗೊಂಡಿರುವ ಶಾಲಾ ಹಾಗೂ ಬಾಲಕಿ ಫಾತಿಮ ಎಂಬವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ವಿದ್ಯಾರ್ಥಿಘಳು ಪ್ರಥಮ ಚಿಕಿತ್ಸೆಯೊಂದಿಗೆ ಮನೆಗೆ ತೆರಳಿದ್ದಾರೆ.
ಶಾಲಾ ಬಸ್ ಮಗುಚಿಬಿದ್ದು, 20ಮಂದಿ ವಿದ್ಯಾರ್ಥಿಗಳಿಗೆ ಗಾಯ
0
ಸೆಪ್ಟೆಂಬರ್ 30, 2022