ಕಾಸರಗೋಡು: ಕಾಸರಗೋಡಿನ ಕೋಟಿಕುಳಂ ಎಂಬಲ್ಲಿ ರೈಲ್ವೇ ಹಳಿ ಮೇಲೆ ಕಬ್ಬಿಣ ರಾಡ್ ಹಾಕಿ ಬುಡಮೇಲುಗೊಳಿಸಲು ಯತ್ನಿಸಿದ ಘಟನೆಯ ತನಿಖೆ ಮಹತ್ವದ ಘಟ್ಟದಲ್ಲಿದೆ. ತಮಿಳುನಾಡಿನ 22 ವರ್ಷದ ಯುವತಿಯೊಬ್ಬಳು ಹಳಿ ಮೇಲೆ ಕಬ್ಬಿಣದ ರಾಡ್ ಹಾಕಿದ್ದಳು. ತಮಿಳುನಾಡಿನ ಕಿಲ್ಲಿಕುರಿಸ್ಸಿ ಮೂಲದ ಕನಕವಲ್ಲಿ ಎಂಬಾಕೆಯನ್ನು ಬೇಕಲ ಪೋಲೀಸರು ಬಂಧಿಸಿದ್ದಾರೆ. ಕಾಂಕ್ರೀಟ್ ಭಾಗವು ರೈಲಿನಿಂದ ಒಡೆದು ಹೋದರೆ ಅದರೊಂದಿಗೆ ಕಬ್ಬಿಣದ ಪಟ್ಟಿಯನ್ನು ಮಾರಾಟ ಮಾಡಬಹುದೆಂಬುದು ಆಕೆಯ ದುರಾಲೋಚನೆಯಾಗಿತ್ತೆಂದು ಪೋಲೀಸರು ಕಂಡುಕೊಂಡಿದ್ದಾರೆ. ತನಿಖೆಯ ಉಸ್ತುವಾರಿ ವಹಿಸಿರುವ ಜಿಲ್ಲಾ ಪೆÇಲೀಸ್ ಮುಖ್ಯಸ್ಥ ಡಾ. ವೈಭವ್ ಸಕ್ಸೇನಾ, ಬೇಕಲ ಡಿವೈಎಸ್ ಪಿ ಸಿ.ಕೆ.ಸುನೀಲ್ ಕುಮಾರ್ ಹಾಗೂ ಆರ್ ಪಿಎಫ್ ಇನ್ಸ್ ಪೆಕ್ಟರ್ ಕತಿರೇಶ್ ಬಾಬು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
10 ದಿನಗಳ ಹಿಂದೆ ಕೊಟ್ಟಿಕುಳಂನಲ್ಲಿ ಹಳಿ ಮೇಲಿನ ಜಲ್ಲಿ ಬೇರ್ಪಡಿಸಿ ಹಳಿಯ ಕಬ್ಬಿಣದ ರಾಡ್ ಕಿತ್ತಿರುವುದು ಕಂಡುಬಂದಿತ್ತು. ಇದು ರೈಲು ಸಂಚಾರ ಬುಡಮೇಲುಗೊಳಿಸುವ ಪ್ರಯತ್ನ ಎಂದು ಪೆÇಲೀಸರು ಭಾವಿಸಿದ್ದರು. ಇದರ ಬೆನ್ನಲ್ಲೇ ಪೆÇಲೀಸರು, ಆರ್‍ಪಿಎಫ್ ಹಾಗೂ ರೈಲ್ವೆ ಪೆÇಲೀಸರು ಜಂಟಿ ತನಿಖೆ ನಡೆಸಿದರು. ಬೇಕಲ ಬಾಡಿಗೆ ಮನೆಯಲ್ಲಿ ನೆಲೆಸಿರುವ ತಮಿಳುನಾಡು ಮೂಲದವರ ಬಗ್ಗೆ ಪೆÇಲೀಸರು ಆರಂಭದಲ್ಲಿ ತನಿಖೆ ನಡೆಸಿದ್ದರು. ಪೆÇಲೀಸರು ಕೊಟ್ಟಿಕುಳಂನಿಂದ ಬೇಕಲ್ ವರೆಗೆ ವಿವರವಾದ ತನಿಖೆ ನಡೆಸಿದರು. ಕಬ್ಬಿಣದ ಪದರ ಪತ್ತೆಯಾದ ದಿನವೇ ಸಂಜೆ ರೈಲಿಗೆ ಕಲ್ಲು ತೂರಾಟ ನಡೆದಿದೆ. ಕುಂಬಳೆಯಲ್ಲಿ ರೈಲು ಹಳಿ ಮೇಲೆ ಕಲ್ಲು ತೂರಿದ ಘಟನೆಯೂ ನಡೆದಿತ್ತು.
ತನಿಖೆ ವೇಳೆ ರೈಲ್ವೆ ಹಳಿ ಮೇಲೆ ನಡೆದು ಹೋಗುತ್ತಿದ್ದ ಕನಕವಲ್ಲಿ ಎಂಬುವರನ್ನು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಆರೋಪ ತಪೆÇ್ಪಪ್ಪಿಕೊಂಡಿದ್ದಾರೆ. ಅಪಾಯ ಅಥವಾ ಇನ್ನಾವುದರ ಬಗ್ಗೆ ನಮಗೆ ತಿಳಿದಿಲ್ಲ ಎಂದು ಪೆÇಲೀಸರಿಗೆ ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಅವರನ್ನು ಬಂಧಿಸಲಾಗಿದ್ದು, ವಿವರವಾಗಿ ವಿಚಾರಣೆ ನಡೆಸಿದಾಗ ತಪೆÇ್ಪಪ್ಪಿಕೊಂಡಿದ್ದಾರೆ. ಪೆÇಲೀಸರು ತೀವ್ರ ವಿಚಾರಣೆ ನಡೆಸಿದ ಬಳಿಕ ಅವರನ್ನು ಬಂಧಿಸಲಾಗಿದೆ. ಈ ಸಂಬಂಧ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ರೈಲ್ವೇ ಸುರಕ್ಷತಾ ಕಮಿಷನರ್ ಕೂಡ ಕಾಸರಗೋಡಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕನಕವಲ್ಲಿಯ ಕುತಂತ್ರ ಫಲ ನೀಡಲಿಲ್ಲ: ತಪ್ಪಿದ್ದು ಭಾರೀ ಅನಾಹುತ: 22 ರ ಹರೆಯದ ಯುವತಿಯ ಬಂಧನ!
0
ಸೆಪ್ಟೆಂಬರ್ 11, 2022