ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ, ಚುನಾವಣಾ ಖರ್ಚುವೆಚ್ಚದ ಲೆಕ್ಕಾಚಾರ ಸಲ್ಲಿಸದ ಕಾಸರಗೋಡು ಜಿಲ್ಲೆಯ 229ಮಂದಿ ಸೇರಿದಂತೆ ರಾಜ್ಯದ 9016ಮಂದಿ ಅಭ್ಯರ್ಥಿಗಳನ್ನು ಚುನಾವಣಾ ಆಯೋಗ ಅನರ್ಹಗೊಳಿಸಿದೆ. ಈ ರೀತಿ ಅನರ್ಹಗೊಂಡವರಿಗೆ ತಮ್ಮ ಚಉನಾಯಿತ ಸ್ಥಾನ ನಷ್ಟಗೊಳ್ಳುವುದರ ಜತೆಗೆ 2022 ಆಗಸ್ಟ್ ತಿಂಗಳಿಂದ ಮುಂದೆ ಐದು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ.
. ಚುನಾವಣೆ ಕಳೆದು 30ದಿವಸದೊಳಗೆ ಲೆಕ್ಕಪತ್ರ ಸಲ್ಲಿಸುವಂತೆ ಆದೇಶವಿದ್ದರೂ, ಇದನ್ನು ಸಕಾಲಕ್ಕೆ ಸಲ್ಲಿಸದವರು ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಖರ್ಚುಮಾಡಿದವರನ್ನು ಅನರ್ಹಗೊಳಿಸಲಾಗುತ್ತದೆ. ಕಣ್ಣೂರು ಜಿಲ್ಲೆಯ ಮಟ್ಟನ್ನೂರ್ ನಗರಸಭೆ ಹೊರತುಪಡಿಸಿ, ಉಳಿದ ಎಲ್ಲ ಸಥಳೀಯಾಡಳಿತ ಸಂಸ್ಥೆಗಳಿಗೆ 2020 ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಮಹಾನಗರಪಾಲಿಕೆಯ 436, ನಗರಸಭೆಯ1266, ಜಿಲ್ಲಾ ಪಂಚಾಯಿತಿಯ 71, ಬ್ಲಾಕ್ ಪಂಚಾಯಿತಿಯ 590 ಹಾಗೂ ಗ್ರಾಮ ಪಂಚಾಯಿತಿಯ 6653 ಮಂದಿ ಸೇರಿದಂತೆ 9016ಮಂದಿಯನ್ನು ಅನರ್ಹಗೊಳಿಸಲಾಗಿದೆ.
ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸುವ ಒಬ್ಬ ಅಭ್ಯರ್ಥಿ ಚುನಾವಣಾ ಖರ್ಚಿಗಾಗಿ ಗರಿಷ್ಠ1.50ಲಕ್ಷ, ಬ್ಲಾಕ್ ಮತ್ತು ನಗರಸಭೆಗೆ 75ಸಾವಿರ, ಗ್ರಾಮ ಪಂಚಾಯಿತಿ ಅಭ್ಯರ್ಥಿ25ಸಾವಿರ ರೂ. ವರೆಗೆ ಖರ್ಚುಮಾಡಬಹುದಾಗಿದೆ.
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ: ಖರ್ಚುವೆಚ್ಚ ಸಲ್ಲಿಸದ ಕಾಸರಗೋಡಿನ 229ಮಂದಿ ಅನರ್ಹಗೊಳಿಸಿದ ಚು.ಆಯೋಗ
0
ಸೆಪ್ಟೆಂಬರ್ 14, 2022