ಕಾಸರಗೋಡು: ಓಣಂ ಹಬ್ಬದ ಹಿನ್ನೆಲೆಯಲ್ಲಿ ಅಳತೆ ಮತ್ತು ತೂಕ ವಿಭಾಗದ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸಿದರು. ಎರಡು ತಂಡಗಳಾಗಿ ಅಧಿಕಾರಿಗಳು ವಿವಿಧ ವ್ಯಾಪಾರ ಸಂಸ್ಥೆಗಳು ಮತ್ತು ಪೆಟ್ರೋಲ್ ಪಂಪ್‍ಗಳಲ್ಲಿ ತಪಾಸಣೆ ನಡೆಸಿದರು.
ತಪಾಸಣೆ ವೇಳೆ 23 ಪ್ರಕರಣಗಳು ದಾಖಲಾಗಿವೆ. ವಾಣಿಜ್ಯ ಸಂಸ್ಥೆಗಳಲ್ಲಿ ಸೀಲ್ ಮಾಡದ ತೂಕದ ಉಪಕರಣಗಳ ಬಳಕೆ ಮತ್ತು ಪ್ಯಾಕೇಜ್‍ಗಳ ಮೇಲೆ ಶಾಸನಬದ್ಧ ಘೋಷಣೆಗಳನ್ನು ಹೊಂದದಿರುವುದು, ವಸ್ತುಗಳ ಸೂಕ್ತ ಪ್ರಮಾಣದ ಕೊರತೆಯೊಂದಿಗೆ ವ್ಯಾಪಾರ ನಡೆಸಿದ್ದಕ್ಕಾಗಿ ಪ್ರಕರಣಗಳು ದಾಖಲಾಗಿವೆ. 43000 ರೂ. ದಂಡ ವಸೂಲಿ ಮಾಡಲಾಗಿದೆ. ದಂಡ ಪಾವತಿಸಲು ಸಿದ್ಧರಿಲ್ಲದವರ ವಿರುದ್ಧ ಮುಂದಿನ ಕ್ರಮ ಜರುಗಿಸಲು ತೀರ್ಮಾನಿಸಲಾಯಿತು. ತಪಾಸಣಾ ಕಾರ್ಯ ಸೆಪ್ಟೆಂಬರ್ 7 ರವರೆಗೆ ನಡೆಯಲಿವೆ. ಉಪ ನಿಯಂತ್ರಕರಾದ ಪಿ.ಶ್ರೀನಿವಾಸ, ಫ್ಲೈಯಿಂಗ್ ವಿಭಾಗದ ಎಸ್.ಎಸ್.ಅಭಿಲಾಷ್, ಸಹಾಯಕ ನಿಯಂತ್ರಕ ಟಿ.ಕೆ.ಕೃಷ್ಣಕುಮಾರ್, ತಹಸೀಲ್ದಾರರಾದ ಎಂ.ರತೀಶ್, ಕೆ.ಶಶಿಕಲಾ, ಕೆ.ಎಸ್.ರಮ್ಯಾ, ತಪಾಸಣಾ ಸಹಾಯಕರಾದ ಟಿ.ವಿ.ಪವಿತ್ರನ್, ಪಿ.ವಿ.ವಿನುಕುಮಾರ್, ರಾಬರ್ಟ್ ಪೇರಾ, ಪಿ.ಶ್ರೀಜಿತ್ ಹಾಗೂ ಚಾಲಕರಾದ ಗಂಗಾಧರನ್, ಪಿ.ಅಜಿತ್ಕುಮಾರ್ ಭಾಗವಹಿಸಿದ್ದರು.