ಇಡುಕ್ಕಿ: ಕೇರಳ ಲಾಟರಿಯ ಅಕ್ಷಯ ಭಾಗ್ಯಕುರಿಯಲ್ಲಿ ಐಶ್ವರ್ಯ ದೇವಿಯು ಎಝಲ್ಲೂರು ತೋಟದ ಮಧ್ಯದಲ್ಲಿರುವ ಕಟ್ಟಡ ಕಾರ್ಮಿಕ ರಾಜೀವ್‍ಗೆ ಸಾಕ್ಷಾತ್ಕಾರಗೊಂಡು ಅಚ್ಚರಿಮೂಡಿಸಿದೆ.
ಮೊನ್ನೆಯ ಲಾಟರಿಯಲ್ಲಿ ರಾಜೀವ್ ಪ್ರಥಮ ಬಹುಮಾನ ಪಡೆದಿದ್ದಾರೆ. ನಿಯಮಿತವಾಗಿ ಟಿಕೆಟ್ ಖರೀದಿಸುವ ರಾಜೀವ್, ಕೆಲವು ದಿ£ಗಳ ಹಿಂದೆÀ 23 ಟಿಕೆಟ್ ಖರೀದಿಸಿದ್ದರು. ಒಂದು ಟಿಕೆಟ್‍ಗೆ ಪ್ರಥಮ ಬಹುಮಾನವಾಗಿ 70 ಲಕ್ಷ ರೂ.ಲಭಿಸಿದೆ.
ಇದಲ್ಲದೇ ಮತ್ತೊಂದು ಟಿಕೆಟ್ ನಿಂದ ಸಮಾಧಾನಕರ ಬಹುಮಾನವಾಗಿ 8000 ರೂ.ಲಭಿಸಿರುವುದು ವಿಶೇಷವಾಗಿದೆ. ರಾಜೀವ್ ಪ್ರತಿದಿನ 10 ಟಿಕೆಟ್‍ಗಳನ್ನು ತೆಗೆದುಕೊಳ್ಳುತ್ತಾರೆ. ರಾಜೀವ್ ಮತ್ತು ಅವರ ಕುಟುಂಬ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪತ್ನಿ ಶ್ರೀಜಾ ಬೇಕರಿ ಉದ್ಯೋಗಿ. ಸದ್ಯಕ್ಕೆ ಸ್ವಂತ ಮನೆ ಕಟ್ಟಬೇಕೆಂಬುದು ರಾಜೀವ್ ಅವರ ಆಸೆ.
ಸಂಖ್ಯೆ ಎಬಿ 132523 ಪ್ರಥಮ ಬಹುಮಾನ ಗಳಿಸಿತು. ಎಎಲ್ 975557 ಸಂಖ್ಯೆಯ ಅಕ್ಷಯ ಲಾಟರಿಯ ದ್ವಿತೀಯ ಬಹುಮಾನ 5 ಲಕ್ಷ ರೂ. ಬುಧವಾರ ಮಧ್ಯಾಹ್ನ 3 ಗಂಟೆಗೆ ಡ್ರಾ ನಡೆಯಿತು. ಅಕ್ಷಯ ಲಾಟರಿ ಟಿಕೆಟ್ ದರ 40 ರೂ. ತೃತೀಯ ಬಹುಮಾನ 12 ಜನರಿಗೆ ತಲಾ 1 ಲಕ್ಷ ರೂ. 11 ನೇ ಸರಣಿಯಲ್ಲಿ ಮೊದಲ ಬಹುಮಾನ ವಿಜೇತರು ಅದೇ ಸಂಖ್ಯೆಯನ್ನು ಹೊಂದಿರುವವರು ತಲಾ 8000 ರೂ.ಗಳ ಸಮಾಧಾನಕರ ಬಹುಮಾನವನ್ನು ಪಡೆಯುತ್ತಾರೆ. ನಾಲ್ಕು, ಐದನೇ, ಆರನೇ, ಏಳನೇ ಮತ್ತು ಎಂಟನೇ ಬಹುಮಾನ ವಿಜೇತರಿಗೆ ಕ್ರಮವಾಗಿ 5000, 2000, 1000, 500 ಮತ್ತು 100 ನೀಡಲಾಗುವುದು.
ಖರೀದಿಸಿದ್ದ 23 ಲಾಟರಿ ಟಿಕೆಟ್: ಕಟ್ಟಡ ಕಾರ್ಮಿಕನಿಗೆ ಒಲಿದ ಪ್ರಥಮ ಬಹುಮಾನ ಮತ್ತು ಸಮಾಧಾನಕರ ಬಹುಮಾನ
0
ಸೆಪ್ಟೆಂಬರ್ 08, 2022