ಪಾಲಕ್ಕಾಡ್: ಪಾಲಕ್ಕಾಡ್ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಕಳೆದ 24 ಗಂಟೆಯಲ್ಲಿ 28 ಮಂದಿಗೆ ಬೀದಿ ನಾಯಿಗಳು ಕಚ್ಚಿರುವುದಾಗಿ ಮಾಹಿತಿ.
ಬೀದಿ ನಾಯಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ದಾಳಿ ಮಾಡಿದೆ. ಕಚ್ಚಿದ 28 ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ನೀಡಲಾಗಿದೆ.
ಬೆಳಗ್ಗೆ 6:30ರಿಂದ ಮಧ್ಯಾಹ್ನ 12:30ರವರೆಗೆ 26 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಾಪೆರುಂ ನೆಲ್ಲಿಕಾಡ್ ಎಂಬಲ್ಲಿ ಬೀದಿ ನಾಯಿ ದಾಳಿಯಿಂದ ಮಕ್ಕಳನ್ನು ರಕ್ಷಿಸಲು ಹೋದ ವ್ಯಕ್ತಿಯೊಬ್ಬರಿಗೆ ನಾಯಿ ಕಚ್ಚಿದೆ. ಮೇಪರಂಬದ ನಿವಾಸಿ ನೆತರಿನ್ ಎಂಬುವವರಿಗೆ ಬೀದಿನಾಯಿ ದಾಳಿ ನಡೆಸಿದೆ. ತೋಟಂ ಎಂಬಲ್ಲಿಯ ಶಾಲೆಯ ಶಿಕ್ಷಕಿಯೊಬ್ಬರ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಶಾಲೆಯ ಸಿಬ್ಬಂದಿ ಕೊಠಡಿ ಎದುರು ನಾಯಿ ದಾಳಿ ಮಾಡಿದೆ.
ನೆನ್ಮಾರಾದಲ್ಲಿ 9ನೇ ತರಗತಿ ವಿದ್ಯಾರ್ಥಿನಿಗೂ ಬೀದಿ ನಾಯಿ ಕಚ್ಚಿದೆ. ಅಟ್ಟುಪಾಡಿಯಲ್ಲಿ ಹಿತ್ತಲಲ್ಲಿ ಆಟವಾಡುತ್ತಿದ್ದ ಬೀದಿನಾಯಿಯೊಂದು ಮೂರು ವರ್ಷದ ಬಾಲಕನಿಗೆ ಕಚ್ಚಿದೆ. ಈ ನಾಯಿಗೆ ರೇಬಿಸ್ ಇರುವುದು ದೃಢಪಟ್ಟಿದೆ.
ಈ ಪರಿಸ್ಥಿತಿಯಿಂದ ಹೊರಬರುವುದು ಹೇಗೆ ಎಂದು ಜನರು ಚಿಂತಾಕ್ರಾಂತರಾಗಿದ್ದಾರೆ.
24 ಗಂಟೆಗಳಲ್ಲಿ 28 ಮಂದಿಗೆ ಬೀದಿ ನಾಯಿ ಕಡಿತ: ಪಾಲಕ್ಕಾಡ್ ಭೀತಿಯಲ್ಲಿ
0
ಸೆಪ್ಟೆಂಬರ್ 13, 2022
Tags