ತಿರುವನಂತಪುರ: ಕೇರಳ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಎಎನ್ ಶಂಸೀರ್ ಅಧಿಕಾರ ಸ್ವೀಕರಿಸಿದರು. ವಿಧಾನಸಭೆ ಚುನಾವಣೆಯಲ್ಲಿ 96 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಎದುರಾಳಿ ಅಭ್ಯರ್ಥಿ ಶಾಸಕ ಅನ್ವರ್ ಸಾದತ್ ಶಾಸಕ 40 ಮತ ಪಡೆದರು. ಶಂಸೀರ್ ಅವರು ವಿಧಾನಸಭೆಯ 24ನೇ ಸ್ಪೀಕರ್ ಆಗಿ ಆಯ್ಕೆಗೊಂಡರು.
ಶಂಸೀರ್ ಅವರಿಗೆ ಶಾ¸ಕಾಂಗದ ಸದಸ್ಯರ ಹಕ್ಕುಗಳನ್ನು ರಕ್ಷಿಸಲು ಮತ್ತು ಅತ್ಯುತ್ತಮ ಪರಂಪರೆಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಚಿಕ್ಕವಯಸ್ಸಿನಲ್ಲೇ ಭಾಷಣಕಾರನಾಗಿ ಹೆಸರುಪಡೆದವರು ಶಂಸೀರ್. ಅವರ ವಯಸ್ಸು ಮೀರಿದ ಪರಿಪಕ್ವತೆ ಮತ್ತು ಜ್ಞಾನ ಉತ್ತಮವಾಗಿ ಮುನ್ನಡೆಸಲಿದೆ ಎಮದು ಮುಖ್ಯಮಂತ್ರಿ ತಿಳಿಸಿರುವರು. ಅವರ ಚಾಕಚಕ್ಯತೆ, ಅನುಭವಗಳು ವಿಧಾನಸಭೆÀ ನಿರ್ವಹಣೆಗೆ ಸಹಕಾರಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಪಿಣರಾಯಿ ವಿಜಯನ್ ಅಭಿನಂದಿಸಿ ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನಸಭೆ ಕಾರ್ಯಗಳನ್ನು ನಿಷ್ಪಕ್ಷಪಾತವಾಗಿ ಮುನ್ನಡೆಸಿದ ಮಾಜಿ ಸ್ಪೀಕರ್ ಹಾಗೂ ಸಚಿವ ಎಂ.ಬಿ.ರಾಜೇಶ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಯುವ ವ್ಯಕ್ತಿಯು ಸ್ಪೀಕರ್ ಆಗಿರುವುದರಿಂದ, ಬದಲಾವಣೆಯು ವಿಧಾನಸಭೆಯ ಸಂಪೂರ್ಣ ಕೆಲಸದಲ್ಲಿ ಪ್ರತಿಫಲಿಸುತ್ತದೆ. ಸ್ಪೀಕರ್ ಕೂಡ ಜಾತ್ಯತೀತ ಹಿನ್ನೆಲೆ ಹೊಂದಿದ್ದಾರೆ. ಸಭಾಧ್ಯಕ್ಷರು ಸದನದ ಕಲಾಪಗಳನ್ನು ಮುಂದುವರಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಇದು ವರ್ಣರಂಜಿತ ಇತಿಹಾಸ ಹೊಂದಿರುವ ಶಾಸಕಾಂಗ ಸಭೆ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿರುವರು. ಗಹನವಾದ ಚರ್ಚೆಗಳು ನಡೆದ ಶಾಸಕಾಂಗವಿದು. ಹಿಂದಿನ ಸ್ಪೀಕರ್ ಇಂತಹ ಗಂಭೀರ ಚರ್ಚೆಗಳನ್ನು ಪ್ರೋತ್ಸಾಹಿಸಿದ್ದಾರೆ. ಶಂಸೀರ್ ಸಂಪ್ರದಾಯವನ್ನು ಉಳಿಸಿಕೊಂಡು ಮುನ್ನಡೆಯಲಿ ಎಂದು ಸತೀಶನ್ ಶುಭ ಹಾರೈಸಿದರು.
ವಿಧಾನಸಭೆಯ 24ನೇ ಸ್ಪೀಕರ್ ಆಗಿ ಎಎನ್ ಶಂಸೀರ್ ಆಯ್ಕೆ: ವಯಸ್ಸಿಗೆ ಮೀರಿದ ಪ್ರಬುದ್ಧತೆ ಅವರದ್ದು ಎಂದ ಮುಖ್ಯಮಂತ್ರಿ: ಸಂಪ್ರದಾಯವನ್ನು ಸಂರಕ್ಷಿಸಲಿ ಎಂದ ವಿ.ಡಿ.ಸತೀಶನ್
0
ಸೆಪ್ಟೆಂಬರ್ 12, 2022
Tags