ಮಂಜೇಶ್ವರ: ಶ್ರೀಮಹಾಗಣಪತಿ ಶಂಕರನಾರಾಯಣ ಸಾಂಸ್ಕøತಿಕ ಕಲಾ ಪ್ರತಿಷ್ಠಾನ ವರ್ಕಾಡಿ ಕೋಳ್ಯೂರು ವತಿಯಿಂದ 'ಯಕ್ಷಗಾನ ನವಾಹ-2022'ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಸೆ. 25ರಿಂದ ಅ. 3ರ ವರೆಗೆ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನ ಸಭಾಂಗಣದಲ್ಲಿ ಜರುಗಲಿದೆ. ಸೆ. 25ರಂದು ಮಧ್ಯಾಹ್ನ 2.30ಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಯಕ್ಷಗಾನ ನವಾಹ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುವರು. ಬೆಂಗಳೂರಿನ ಉದ್ಯಮಿ ಬಿ. ರಾಮಚಂದ್ರ ಅಧ್ಯಕ್ಷತೆ ವಹಿಸುವರು. ವೇದಮೂರ್ತಿ ರಾಜೇಶ್ ತಾಳಿತ್ತಾಯ, ವೇ.ಮೂ ರವಿಶಂಕರ ಹೊಳ್ಳ, ವೇ.ಮೂ ಹರಿನಾರಾಯಣ ಹೊಳ್ಳ ಕುಂಬಳೆ ದಿವ್ಯ ಉಪಸ್ಥಿತಿ ವಹಿಸುವರು. ಈ ಸಂದರ್ಭ ನಡೆಯುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ರಾಘವದಾಸ್ ಬಿ ಹೂಹಾಕುವ ಕಲ್ಲು, ವೆಂಕಟ್ರಮಣ ಕೂಡ್ಲು ಕಾಸರಗೋಡು, ಜಯಂತ ಜೋಗಿ ಸಜಂಕಿಲ, ಐತ್ತಪ್ಪ ಟೈಲರ್ ಕೊಡಂಗೆ ಅವರನ್ನು ಸನ್ಮಾನಿಸಲಾಗುವುದು. ನಂತರ ಪ್ರತಿಷ್ಠಾನ ಸದಸ್ಯರಿಂದ ಯಕ್ಷಗಾನ ಬಯಲಾಟ ನಡೆಯುವುದು.
ಸೆ. 25ರಿಂದ ಅ. 2ರ ವರೆಗೆ ಪ್ರತಿ ದಿನ ಬೆಳಗ್ಗೆ 9.30ರಿಂದ ವಿವಿಧ ತಂಡಗಳಿಂದ ಯಕ್ಷಗಾನ ತಾಳಮದ್ದಳೆ, ಅ. 3ರಂದು ಯಕ್ಷಗಾನ ತಾಳಮದ್ದಳೆ ಮತ್ತು ಯಕ್ಷಗಾನ ಬಯಲಾಟ ನಡೆಯುವುದು.
ಅ. 3ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಆಶೀರ್ವಚನ ನೀಡುವರು. ವೇ.ಮೂ ಗಣೇಶ ತಂತ್ರಿ ವರ್ಕಾಡಿ, ವೇ.ಮೂ ರಾಮ ಭಟ್ ಬೋಳಂತಕೋಡಿ ಉಪಸ್ಥಿತರಿರುವರು. ಸಾಹಿತಿ ಡಾ. ನಾ. ಮೊಗಸಾಲೆ ಅಧ್ಯಕ್ಷತೆ ವಹಿಸುವರು. ಈ ಸಧಕರಿಗೆ ಸನ್ಮಾನ ನಡೆಯುವುದು. ರಾತ್ರಿ 8ರಿಂದ ಪ್ರಸಿದ್ಧ ಕಲಾವಿದರಿಂದ ತ್ರಿಜನ್ಮ ಮೋಕ್ಷ ಯಕ್ಷಗಾನ ಬಯಲಾಟ ಜರುಗಲಿರುವುದು.
ಸೆ. 25ರಿಂದ ಕೋಳ್ಯೂರಿನಲ್ಲಿ 'ಯಕ್ಷಗಾನ ನವಾಹ-2022'-ದಶಮಾನೋತ್ಸವ ಸಂಭ್ರಮ
0
ಸೆಪ್ಟೆಂಬರ್ 22, 2022