ಪೆರ್ಲ: ಶುಳುವಾಲಮೂಲೆ ಶ್ರೀಸದನದಲ್ಲಿ ವಾರ್ಷಿಕ ಶರನ್ನವರಾತ್ರಿ ಮಹೋತ್ಸವ ಸೆ.26 ರಿಂದ ಅ.5ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಪ್ರತಿನಿತ್ಯ ಬೆಳಿಗ್ಗೆ ಮಹಾಗಣಪತಿಹವನ, ಮಧ್ಯಾಹ್ನ ಪೂಜೆ, ಸಂಜೆಪೂಜೆ, ಸಪ್ತಶತೀ ಪಾರಾಯಣ, ಲಲಿತಾ ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ, ಮಂಗಳಾರತಿಗಳು ನಡೆಯಲಿವೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸೆ.26 ರಂದು ಸಂಜೆ 6.30 ರಿಂದ ಪಡ್ರೆಚಂದು ಸ್ಮಾರಕ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಶ್ರಾವಣಿ ಕಾಟುಕುಕ್ಕೆ ಅವರಿಂದ ಶ್ರೀದೇವಿಗೆ ಗಾನಾಮೃತ, 27 ರಂದು ಸಂಜೆ 6.30 ರಿಂದ ಪೆರ್ಲದ ಶ್ರೀಅಯ್ಯಪ್ಪಸ್ವಾಮಿ ಭಜನ ಸಂಘದವರಿಂದ ಭಜನಾ ಸಂಕೀರ್ತನೆ, 29 ರಂದು ರಾತ್ರಿ 8.30 ರಿಂದ ಯಕ್ಷಗುರು ಜಯರಾಮ ಪಾಟಾಳಿ ಪಡುಮಲೆ ಅವರ ನಿರ್ದೇಶನದಲ್ಲಿ ಬದಿಯಡ್ಕದ ಶ್ರೀಶಾರದಾಂಬ ಯಕ್ಷಗಾನ ಕಲಾಸಂಘದವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ ಯಕ್ಷಗಾನ ಬಯಲಾಟ, 30 ರಂದು ಸಂಜೆ 6.30 ರಿಂದ ಕಾತೀಕಶ್ಯಾಮ ಮುಂಡೋಳುಮೂಲೆ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ರಾತ್ರಿ 9 ರಿಂದ ಕುಂಟಾಲುಮೂಲೆಯ ಚಿರಂಜೀವಿ ಯಕ್ಷಗಾನ ಕಲಾಸಂಘದವರಿಂದ ಅಬ್ಬರದ ಬಬ್ಬರ್ಯೆ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅ.1 ರಂದು ಸಂಜೆ 6.30 ರಿಂದ ಡಾ.ಸತೀಶ ಪುಣಿಚಿತ್ತಾಯರ ನಿರ್ದೇಶನದಲಿ ಯಕ್ಷಾಂತರಂಗ ಪೆರ್ಲ ಇದರ ಚಿಣ್ಣರಿಂದ ಯಕ್ಷಗಾನಾರ್ಚನೆ ನಡೆಯಲಿದೆ. ಅ.2 ರಂದು ಬೆಳಿಗ್ಗೆ 10.30 ರಿಂದ ಶ್ರೀಶಾಸ್ತಾ ಮ್ಯೂಸಿಕ್ ಪೆರ್ಲ ತಂಡದವರಿಂದ ಭಜನಾ ಸಂಕೀರ್ತನೆ, ಅ.3 ರಂದು ರಾತ್ರಿ 8.30 ರಿಂದ ರಂಗಸಿರಿ ಸಾಂಸ್ಕøತಿಕ ವೇದಿಕೆ ತಂಡದವರಿಂದ ಏಕಾದಶಿ ದೇವಿ ಮಹಾತ್ಮ್ಯೆ ಯಕ್ಷಗಾನ ಬಯಲಾಟ ನಡೆಯಲಿದೆ. ಅ.4 ರಂದು ಬೆಳಿಗ್ಗೆ 10 ರಿಂದ ಶ್ರೀದುರ್ಗಾ ಬಂಟರ ಮಹಿಳಾ ಭಜನ ಮಂಡಳಿಯವರಿಂದ ಭಜನಾ ಸಂಕೀರ್ತನೆ, ರಾತ್ರಿ 7.30 ರಿಂದ ವಸುಧಶ್ರೀ ಕೋಳಿಕ್ಕಜೆ ಇವರಿಂದ ಶ್ರೀಚಕ್ರ ನವಾವರಣಗಳಿಂದ ಆಯ್ದ ಕೃತಿ, ವಾರ ಕೀರ್ತನೆ ಮೊದಲಾದವುಗಳನ್ನೊಳಗೊಂಡ ಸಂಗೀತ ಅರ್ಚನೆ ನಡೆಯಲಿದೆ. ಅ.4 ರಂದು ನವಮಿಯ ಪ್ರಯುಕ್ತ ಬೆಳಿಗ್ಗೆ 8 ರಿಂದ ಚಂಡಿಕಾ ಹವನ ಪ್ರಾರಂಭ, 11.30 ಕ್ಕೆ ಪೂರ್ಣಾಹುತಿ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ರಾತ್ರಿ 9.30 ರಿಂದ ಮಂಗಳಾರತಿ, ಅಷ್ಟಾವಧಾನಸೇವೆ, ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಳ್ಳಲಿದೆ.
ಶುಳುವಾಲಮೂಲೆಯಲ್ಲಿ ಶರನ್ನವರಾತ್ರಿ ಮಹೋತ್ಸವ 26 ರಿಂದ
0
ಸೆಪ್ಟೆಂಬರ್ 22, 2022